ಸೋಮವಾರಪೇಟೆ, ಜ.13: ಇಲ್ಲಿನ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಜ್ಯೋತಿ ಆಚರಣೆಯ ಪ್ರಯುಕ್ತ ತಾ. 14ರಂದು (ಇಂದು) ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನಡೆಯಲಿದೆ.
ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಮೇಲ್ಶಾಂತಿ ಪೂಜೆ ನಡೆಯುವದು. ಈ ಸಂದರ್ಭ ಅಯ್ಯಪ್ಪಸ್ವಾಮಿಗೆ ತುಪ್ಪಾಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು ನಡೆಯಲಿದೆ. 8 ಗಂಟೆಯಿಂದ ದೇವಾಲಯದ ನಾಗದೇವತೆಗಳಿಗೆ ಆಶ್ಲೇಷ ಪೂಜೆ ನಡೆಯಲಿದೆ.
ಸಂಜೆ 6 ಗಂಟೆಯಿಂದ ವಿಶೇಷ ಶಾಸ್ತಾ ಪೂಜೆ ನಡೆದು, ದೂರದರ್ಶನದ ಮೂಲಕ ಮಕರ ಜ್ಯೋತಿ ದರ್ಶನ ನಡೆಯಲಿದೆ. ಮಹಾಮಂಗಳಾರತಿ, ಹರಿವರಾಸನಂ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಕಾರ್ಯದರ್ಶಿ ಎನ್.ಟಿ. ಪ್ರಸನ್ನ ನಾಯರ್ ತಿಳಿಸಿದ್ದಾರೆ.