ಮಡಿಕೇರಿ, ಜೂ.18: ಗಾಳಿಬೀಡು ಜವಾಹಾರ್ ನವೋದಯ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯ ಪ್ರವೇಶ ಪರೀಕ್ಷೆಯು ತಾ. 19 ರಂದು (ಇಂದು) ನಡೆಯಲಿದೆ. ಎಲ್ಲಾ ಅಭ್ಯರ್ಥಿಗಳು ಈ ಹಿಂದೆ ವಿತರಿಸಿದ ಪ್ರವೇಶ ಪತ್ರದೊಂದಿಗೆ ಹಾಜರಾಗುವಂತೆ ಗಾಳಿಬೀಡು ನವೋದಯ ವಿದ್ಯಾಸಂಸ್ಥೆ ಪ್ರಾಂಶುಪಾಲರು ತಿಳಿಸಿದ್ದಾರೆ.