ಕೂಡಿಗೆ, ನ. 4: ಕೂಡಿಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಗೂಡ್ಸ್ ಚಾಲಕರ ಮತ್ತು ಮಾಲೀಕರ ಸಂಘದ ಸಂಯುಕ್ತ ಆಶ್ರಯದಲ್ಲಿ 2ನೇ ವರ್ಷದ ಕನ್ನಡ ರಾಜ್ಯೋತ್ಸವ ತಾ. 5 ರಂದು (ಇಂದು) ಕೂಡಿಗೆ ಸರ್ಕಲ್‍ನ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ 8.30 ಕ್ಕೆ ಕಣಿವೆ ಸಾಹಿತಿ ಭಾರಧ್ವಜ್ ದ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಮೆರವಣಿಗೆ ಉದ್ಘಾಟನೆಯನ್ನು ಸ್ಥಳೀಯ ಜ್ಞಾನೋದಯ ಶಾಲೆಯ ವ್ಯವಸ್ಥಾಪಕ ಹೆಚ್.ಎಸ್. ಮುದ್ದಪ್ಪ ಮಾಡಲಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುವದು. ಸಂಜೆ 6 ಗಂಟೆಗೆ ಸೋಮಶೇಖರ್ ಕುಹು ಕುಹು ಮೆಲೋಡಿಸ್ ಇವರಿಂದ ಜನಪದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಎಸ್.ಸಿ. ನಾಗೇಶ್ ತಿಳಿಸಿದ್ದಾರೆ.