ಮಡಿಕೇರಿ, ನ. 25: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡವ ಆಸೋಸಿಯೇಶನ್ ಚೆಂಬೆಬೆಳ್ಳೂರು, ಮಹಿಳಾ ಸಮಾಜ ವತಿಯಿಂದ ತಾ. 26 ರಂದು (ಇಂದು) ಬೆಳಿಗ್ಗೆ 10:30 ಗಂಟೆಗೆ ಮಹಿಳಾ ಸಮಾಜ, ಚೆಂಬೆಬೆಳ್ಳೂರುವಿನಲ್ಲಿ “ಆಟ್-ಪಾಟ್ ತರಬೇತಿ ಸಮಾರೋಪ ಸಮಾರಂಭ” ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ತಕ್ಕ ಮುಖ್ಯಸ್ಥ ಕೊಳುವಂಡ ಕಾರ್ಯಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್ ನಾಣಯ್ಯ, ಕೊಡವ ಅಸೋಸಿಯೇಶನಿನ ಅಧ್ಯಕ್ಷ ಚಂಬಂಡ ಮುದ್ದು ಮುದ್ದಪ್ಪ, ಗ್ರಾಮದ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಮಂಡೇಪಂಡ ಸುನೀತ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂಬಂಡ ರಂಜು ಭೀಮಯ್ಯ, ಕೋಳೆರ ಟೀನಾ ದೇವಯ್ಯ ಇವರುಗಳು ಭಾಗವಹಿಸಲಿದ್ದಾರೆ.