ಮಡಿಕೇರಿ, ಆ. 11: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅವಂದೂರಿನ ಶ್ರೀ ಗೋಪಾಲ್ ಕೃಷ್ಣ ಯುವಸಂಘ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಸಹಯೋಗದೊಂದಿಗೆ ತಾ. 12ರಂದು (ಇಂದು) ಕೆಸರುಗದ್ದೆ ಕ್ರೀಡೋತ್ಸವ ಹಾಗೂ ಸಾಂಪ್ರದಾಯಿಕ ನಾಟಿ ಓಟ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 10ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಈ ಸಂಬಂಧ ಅವಂದೂರಿನ ಕಾಳೇರಮ್ಮನ ಅಯ್ಯಣ್ಣ ಅವರ ಗದ್ದೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರೀಡೋತ್ಸವದಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.