ಮಡಿಕೇರಿ, ಆ. 7: ಹರಿದು ಹಂಚಿ ಹೋಗಿರುವ ಭಾರತ ದೇಶದ ಪ್ರದೇಶಗಳನ್ನು ಒಗ್ಗೂಡಿಸುವ ಸಂಕಲ್ಪದೊಂದಿಗೆ ಜನ ಜಾಗೃತಿ ಮೂಡಿಸುವದಕ್ಕಾಗಿ ಅಖಂಡ ಭಾರತ ಸಂಕಲ್ಪ ದಿನವನ್ನು ತಾ. 8 ರಂದು (ಇಂದು) ಮಡಿಕೇರಿಯಲ್ಲಿ ಆಚರಿಸಲಾಗುವದೆಂದು ಹಿಂದೂ ಜಾಗರಣಾ ವೇದಿಕೆ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮಡಿಕೆÉೀರಿ ತಾಲೂಕು ಸಂಚಾಲಕ ಕುಕ್ಕೇರ ಎನ್. ಅಜಿತ್, ಸೋಮವಾರ ಸಂಜೆ 6.30 ಕ್ಕೆ ನಗರದ ಪೇಟೆ ಶ್ರೀರಾಮಮಂದಿರ ದಿಂದ ತಿಮ್ಮಯ್ಯ ವೃತ್ತದ ಮೂಲಕ ಕೊಡವ ಸಮಾಜದವರೆಗೆ ಪಂಜಿನ ಮೆರವಣಿಗೆ ಯನ್ನು ಆಯೋಜಿಸಿರು ವದಾಗಿ ತಿಳಿಸಿದರು. ಅಂದು ರಾತ್ರಿ 8 ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಸೇನಾ ಅಧಿಕಾರಿ ಕರ್ನಲ್ ಪಿ.ಎನ್. ಗಣೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ದೇಶಕ್ಕೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಪ್ರಚಾರ ದೊರೆಯುತ್ತಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದಿದ್ದು, ಬಲಿದಾನಗಳು ಕೂಡ ಆಗಿದೆ. ಆದರೆ, ಈ ಬಗ್ಗೆ ಪಠ್ಯ ಕ್ರಮಗಳಲ್ಲಿ ಯಾವದೇ ಮಾಹಿತಿಗಳಿಲ್ಲ. ದೇಶಕ್ಕಾಗಿ ಜೀವ ತೆತ್ತವರ ಬಗ್ಗೆ ಯುವ ಸಮೂಹಕ್ಕೆ ಮಾಹಿತಿ ನೀಡುವದು ಸಂಕಲ್ಪ ದಿನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಹಿಂದೂಗಳಿಂದ ಯಾವದೇ ಅಶಾಂತಿಯ ವಾತಾವರಣ ನಿರ್ಮಾಣವಾಗಿಲ್ಲ. ಆದರೆ, ದೇಶದ ಭಾಗಗಳು ಹಂಚಿಹೋದ ನಂತರ ಅಶಾಂತಿ ಮತ್ತು ಭಯೋತ್ಪಾದನೆ ಆರಂಭವಾಗಿದೆ. ತುಂಡಾದ ಭಾರತದ ಭೂಪಟವನ್ನು ಇಲ್ಲದಂತೆ ಮಾಡಿ ಅಖಂಡ ಭಾರತದ ಭೂಪಟ ರಚನೆಯೇ ವೇದಿಕೆಯ ಗುರಿಯೆಂದು ಅಜಿತ್ ತಿಳಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿದ್ದಂಡ ಸುಜ, ತಾಲೂಕು ಅಧ್ಯಕ್ಷ ಬೊಳ್ದಂಡ ಪೆÇನ್ನಪ್ಪ, ಪ್ರಮುಖರಾದ ಅಜ್ಜೆಟ್ಟೀರ ಕಿಶನ್ ಮತ್ತು ನಂದೀಶ್ ಉಪಸ್ಥಿತರಿದ್ದರು.