ಮಡಿಕೇರಿ, ನ.20 : ನಗರ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲಾಯಿತು. ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಈ ಸಂದರ್ಭ ನಗರ ವಕ್ತಾರ ತೆನ್ನಿರ ಮೈನಾ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರೂ ಹಾಗೂ ನಗರಸಭಾ ಸದಸ್ಯೆ ಲೀಲಾಶೇಷಮ್ಮ, ಹಿರಿಯ ಸಲಹೆಗಾರ ಎಂ.ಎಂ.ಇಸ್ಮಾಯಿಲ್, ಕಾಂಗ್ರೆಸ್ ಸೇವಾದಳದ ಮಹಿಳಾ ಅಧ್ಯಕ್ಷೆ ಪ್ರೇಮ, ಪ್ರಮುಖರಾದ ಎಂ.ಎ.ಮೊಹಮ್ಮದ್, ಎಂ.ವೈ.ಫಯಾಜ್ó ಜಫ್ರುಲ್ಲಾ, ಮುನೀರ್ ಮಾಚರ್, ಎಂ.ಎಂ.ಹನೀಫ್, ಯಾಲದಾಳು ಕುಸುಮ, ಮಾಳೆರ ಲೀಲಾವತಿ, ಎಂ.ಬಿ.ಕೌಶರ್, ಕೂಪದಿರ ಉತ್ತಪ್ಪ, ಉದಿಯಂಡ ಸುಭಾಷ್, ಯಮುನಾ, ಆರ್.ಸುಭಾಷ್, ಮಹಮ್ಮದ್ ಹಯಾತ್, ನವೀನ್, ಜಗದೀಶ್, ಅಫೀಜ್ó ಸೇರಿದಂತೆ ಕಾರ್ಯಕರ್ತರು ಈ ಸಂದರ್ಭ ಹಾಜರಿದ್ದರು.