ನಾಪೆÉÇೀಕ್ಲು, ನ. 16: ಸೋಮವಾರಪೇಟೆ ಸಮೀಪದ ಐಗೂರು ಮಸೀದಿಯಲ್ಲಿ ಪವಿತ್ರ ಗ್ರಂಥ ಕುರಾನ್‍ಗೆ ಬೆಂಕಿಯಿಟ್ಟ ಕಿಡಿಗೇಡಿಗಳನ್ನು ಮುಂದಿನ 7 ದಿನದ ಒಳಗೆ ಬಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವದಲ್ಲದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಹೋರಾತ್ರಿ ಧರಣಿ ನಡೆಸಲಾಗುವದು ಎಂದು ಕೊಡಗು ಮುಸ್ಲಿಂ ಸಮಾಜದ ನಾಯಕ ಪಿ.ಎಂ. ಖಾಸಿಂ ಎಚ್ಚರಿಸಿದ್ದಾರೆ.ನಾಪೆÉÇೀಕ್ಲು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಕುರಾನ್ ಮುಸ್ಲಿಂ ಪವಿತ್ರ ಗ್ರಂಥ. ಇದು ಸಮಾಜದ ಶಾಂತಿ ಕದಡುವ ಹುನ್ನಾರವಾಗಿದೆ. ಇವರನ್ನು ಪತ್ತೆ ಹಚ್ಚಿ ಬಂಧಿಸುವದರ ಮೂಲಕ ಮುಂದೆ ನಡೆಯಬಹುದಾದ ಘಟನೆಗಳನ್ನು ತಡೆಯಲು ಸಾಧ್ಯ ಎಂದರಲ್ಲದೆ ಮುಂದಿನ ಏಳು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುವದು ಎಂದು ಎಚ್ಚರಿಸಿದರು. ಈ ಪ್ರಕರಣಗಳಿಗೆ ಪೆÇಲೀಸ್ ಇಲಾಖೆಯ ನಿಷ್ಕ್ರಿಯತೆಯೇ ಕಾರಣ ಎಂದು ದೂರಿದ ಅವರು 1992 ರಲ್ಲಿ ಇದೆ ಮಸೀದಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಇದುವರೆಗೂ

ಪೆÇಲೀಸರು ಯಾವದೆ ಆರೋಪಿಗಳನ್ನು ಬಂಧಿಸಿಲ್ಲ. ಅದರಂತೆ ಕುಶಾಲನಗರದ ಮಸೀದಿಗೆ ಕಲ್ಲು ಎಸೆದು ಜಖಂ ಗೊಳಿಸಿದ ಕಿಡಿಗೇಡಿಗಳನ್ನೂ ಬಂಧಿಸಲಾಗಿಲ್ಲ. ಇಂದಿನ ಘಟನೆಗೆ ಇದು ಕೂಡ ಕಾರಣವಾಗಿದೆ ಎಂದು ಹೇಳಿದರು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಸಿದ ಅವರು ಇದು ಹೀಗೆ ಮುಂದುವರೆದರೆ ನಾವು ಸಹ ಕೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದಕ್ಕೆ ಪೆÇಲೀಸ್ ಇಲಾಖೆ ಅವಕಾಶ ನೀಡದೆ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಈ ಘಟನೆಯನ್ನು ಖಂಡಿಸುವ ಬದಲು ಒಂದು ಸಂಘಟನೆ ಪರವಹಿಸಿ ಮಾತನಾಡುವದು ತರವಲ್ಲ. ಇವರು ಜನಪ್ರತಿನಿಧಿ ಎಂಬವದನ್ನು ಅರಿತುಕೊಳ್ಳಲಿ. ಶಾಸಕರು ಕೂಡ ತಮ್ಮ ಕಾರ್ಯವ್ಯಾಪ್ತಿ ಮತ್ತು ಘನತೆಗೆ ತಕ್ಕಂತೆ ವರ್ತಿಸಲಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್.ಅಬ್ದುಲ್ ರಹಿಮಾನ್ ಮಾತನಾಡಿ ನಮ್ಮ ಪ್ರತಿಭಟನೆ ಯಾವದೇ ಜಾತಿ ಧರ್ಮದ ವಿರುದ್ಧವಲ್ಲ. ತಪ್ಪಿತಸ್ಥರನ್ನು ಬಂಧಿಸುವ ವಿರುದ್ಧ ಮಾತ್ರ. ಐಗೂರು ಮಸೀದಿಯಲ್ಲಿ ಪವಿತ್ರ ಕುರಾನ್ ಗ್ರಂಥ ಮತ್ತು ನಮಾಜ್ ಮಾಡುವ ಚಾಪೆಯನ್ನು ಕಿಡಿಗೇಡಿಗಳು ಸುಟ್ಟಿರುವದು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.

ಜೆ.ಡಿ.ಎಸ್. ಅಲ್ಪ ಸಂಖ್ಯಾಂತ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಮನ್ಸೂರ್ ಅಲಿ ಮಾತನಾಡಿ ಮಾನವನಿಗೆ ಹೃದಯದಂತೆ ಮುಸ್ಲಿಂರ ಕುರಾನ್ ಗ್ರಂಥವು ಕೂಡಾ. ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕುಕೃತ್ಯವೆಸಗಿದ್ದಾರೆ. ಇವರನ್ನು ಕೂಡಲೇ ಬಂಧಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋ ರಾತ್ರಿ ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದರು.

ಎಸ್.ಡಿ.ಪಿ.ಐ ಮುಖಂಡ ಅಮೀನ್ ಮೊಹಿಸಿನ್ ಮಾತನಾಡಿ ಐಗೂರು ವ್ಯಾಪ್ತಿಯಲ್ಲಿ 1992ನೇ ಇಸವಿಯಿಂದಲೇ ಸಂಘ ಪರಿವಾರವು ಮುಸ್ಲಿಂ ಜನತೆಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ. ಇದನ್ನು ಕೊಡಗು ಮುಸ್ಲಿಂ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಜಾತಿ – ಜಾತಿ ಮತ್ತು ಧರ್ಮ – ಧರ್ಮಗಳ ನಡುವೆ ವೈಷಮ್ಯ ಮೂಡಿಸುವ, ವಿಷ ಬೀಜ ಬಿತ್ತುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಷÀಡ್ಯಂತ್ರ ರೂಪಿಸಲಾಗುತ್ತಿದೆ. ಮುಸಲ್ಮಾನರು ಯಾವದೇ ಅಧಿಕಾರಿ ನಂಬಿ ಇಲ್ಲ. ನಮ್ಮ ಶಕ್ತಿಯ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಪೆÇಲೀಸರು ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಮಡಿಕೇರಿ ವಕೀಲ ಕುಂಞಬ್ದುಲ್ಲ ಮಾತನಾಡಿ ಈ ಘಟನೆಯನ್ನು ನಾವು ಘಂಟಾಘೋಷವಾಗಿ ಖಂಡಿಸುತ್ತೇವೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದರೆ ಜಿಲ್ಲೆ, ರಾಜ್ಯ, ದೇಶ, ವಿಶ್ವದಾದ್ಯಂತ ಪ್ರತಿಭಟನೆಯನ್ನು ವಿಸ್ತರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಷೀರ್ ಎಡಪಾಲ ಮತ್ತಿತರರು ಮಾತನಾಡಿದರು. ಪಟ್ಟಣದ ಎಲ್ಲಾ ಮುಸ್ಲಿಂ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಪಿ.ಎಂ. ಅಬ್ದುಲ್ ಅಜೀಜ್, ಮಕ್ಕಿ ನಾಸೀರ್, ಮಹಮ್ಮದ್ ಹನೀಫ್, ಮಹಮ್ಮದ್ ಸಾಫಿ, ಅದಪೆÇಳೆ ಮಹಮ್ಮದ್ ಹಾಜಿ, ಪಿ.ಎಂ.ರಶೀದ್, ಅಹಮ್ಮದ್, ಕೆ.ಎ. ಹ್ಯಾರಿಸ್, ಟಿ.ಎ.ಮಹಮ್ಮದ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನಾಂಗ ಬಾಂಧವರು ನೆರೆದಿದ್ದರು.