ಭಾಗಮಂಡಲ, ನ. 6: ತೀರ್ಥ ಕ್ಷೇತ್ರ ಭಾಗಮಂಡಲದಲ್ಲಿ ಶ್ರೀ ಕಾಶಿಮಠ ಸಂಸ್ಥಾನದ ವತಿಯಿಂದ ಸುಸಜ್ಜಿತ ಆಯುರ್ವೇದ ಸಸ್ಯವನ ರೂಪುಗೊಂಡಿದ್ದು, ಇಂದು ಶ್ರೀ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭ ಹಿರಿಯ ಸ್ವಾಮೀಜಿ ಭುವನೇಂದ್ರ ತೀರ್ಥ ಸ್ವಾಮೀಜಿಗಳ ಭವ್ಯ ಮೂರ್ತಿಯನ್ನು ಅನಾವರಣಗೊಳಿಸಿದರು. ಶುಕ್ರವಾರದಿಂದಲೇ ಇಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಈ ಸಂದರ್ಭ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ.ಪಿ. ದಯಾನಂದ ಪೈ, ಭಾಗಮಂಡಲ ಶ್ರೀ ಕಾಶಿ ಮಠಾಧ್ಯಕ್ಷ ಡಾ. ಜಗನ್ನಾಥ ಶೆಣೈ, ಬಾಂಬೆ ಸೇವಾ ಮಂಡಲದ ಅಧ್ಯಕ್ಷ ಆರ್.ಪಿ. ಭಟ್ ಹಾಗೂ ನೂರಾರು ಸಮಾಜ ಬಾಂಧವರು ಇದ್ದರು.