ಸುಂಟಿಕೊಪ್ಪ, ಡಿ. 24: ವಿದ್ಯಾರ್ಥಿಗಳು ಮುಂದಿನ ಬದುಕಿನ ಬಗ್ಗೆ ಆತ್ಮಸ್ಥೈರ್ಯ ಬೆಳೆಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂದು ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವ್ಯವಸ್ಥಾಪಕ ಫಾದÀರ್ ಎಡ್ವರ್ಡ್ ವಿಲಿಯಂ ಸಾಲ್ಡಾನ ಕಿವಿಮಾತು ಹೇಳಿದರು.
ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮುಂದಿನ ಬದುಕಿನ ಬಗ್ಗೆ ಈಗಿನಿಂದಲೇ ಶ್ರದ್ಧೆ, ಕಠಿಣ ಪರಿಶ್ರಮ ವಹಿಸಿ ಕ್ರೀಡೆ ಹಾಗೂ ವಿದೆÉ್ಯಯಲ್ಲಿ ಮುಂದೆ ಬಂದು ಜೀವನ ರೂಪಿಸಲು ಆಸಕ್ತಿ ವಹಿಸಬೇಕು. ಭಾರತೀಯ ಸೇನೆಯಲ್ಲೂ ತಮ್ಮ ಸೇವೆ ತೊಡಗಿಸಲು ಮುಂದಾಗಬೇಕು. ತಾನು ಎಂಬ ಅಹಂ ವಿದ್ಯಾರ್ಥಿಗಳಿಗೆ ಇರಬಾರದು. ಶಿಸ್ತಿನ ಜೀವನ ನಡೆಸಿ ಬದುಕಿನಲ್ಲಿ ಜೀವನೋತ್ಸಾಹ ಕಂಡುಕೊಳ್ಳಬೇಕೆಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ವೆಂಕಟೇಶ್ ಮಾತನಾಡಿ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿರುವದಲ್ಲದೆ, ಪ್ರತಿ ವರ್ಷ ಈ ಶಾಲೆಗೆ ಶೇ. 100 ಫಲಿತಾಂಶ ಬರುತ್ತಿದೆ. ಇದಕ್ಕೆ ಇಲ್ಲಿನ ಶಿಕ್ಷಕರ, ಮುಖ್ಯೋಪಾಧ್ಯಾಯರ ಆಡಳಿತ ಮಂಡಳಿಯವರ ಶೃದ್ಧೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಸುಂಟಿಕೊಪ್ಪ ಪಟ್ಟಣಕ್ಕೆ ಈ ಶಾಲೆ ಕೀರ್ತಿ ತಂದಿದೆ ಎಂದು ನುಡಿದರು.
ಕ್ರೀಡಾ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲೆಸ್ವಾಮಿ ನೆರವೇರಿಸಿ ಸಮಾರಂಭಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ, ಸಂತ ಅಂತೋಣಿ ಕ್ಲಾರ ಕನ್ಯಾಸ್ತ್ರೀ ಮಟ್ಟದ ಹಿರಿಯ ಶಿಕ್ಷಕಿ ಸಿಸ್ಟರ್ ವೈಲೆಟ್ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸೆಲ್ವರಾಜ್, ಸಂತ ಅಂತೋಣಿ ಶಾಲೆಯ ಶಿಕ್ಷಕಿ ಸಿಸ್ಟರ್ ವೈಲೆಟ್ ಉಪಸ್ಥಿತದ್ದರು.
ಶಾಲಾ ಮಕ್ಕಳಿಂದ ಪಥಸಂಚಲನ, ಕವಾಯತು, ನೃತ್ಯ, ಸಾಹಸ ಪ್ರದರ್ಶನಗಳು ಪೋಷಕರನ್ನು ಪುಳಕಿತಗೊಳಿಸಿತು.