ಸುಂಟಿಕೊಪ್ಪ,ಜ.28: ಜೀವನದಲ್ಲಿ ಪ್ರತಿಯೊಬ್ಬರೂ ಆತ್ಮಸ್ಥೈರ್ಯ ಮೈಗೂಡಿಸುವ ಮೂಲಕ ಸಮಸ್ಯೆಗಳನ್ನು ಮೆಟ್ಟಿ ನಿಂತು ನೆಮ್ಮದಿಯ ಬದುಕನ್ನು ರೂಢಿಸಿಕೊಳ್ಳಬೇಕು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಕರೆ ನೀಡಿದರು.ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಚಿವ ಖಾದರ್ ಮಾತನಾಡಿ ಸಮಾಜದಲ್ಲಿ ಸಣ್ಣಪುಟ್ಟ ವಿಚಾರಗಳನ್ನು ಬದಿಗಿರಿಸಿ ಎಲ್ಲಾ ಜಾತಿ ಧರ್ಮ ಜನಾಂಗದವರು ಒಂದೇ ತಾಯಿ

ಮಕ್ಕಳಂತೆ ಜೀವಿಸು ವದನ್ನು ಕಲಿತರೆ ದೇಶದ ಅಭಿವೃದ್ಧಿ ಆಗಲಿದೆ. ಮಾನವ ಎಷ್ಟು ದಿನ ಬದುಕಿದ ಎಂಬದು ಮುಖ್ಯವಲ್ಲ. ಸಮಾಜದ ಒಳಿತಿಗಾಗಿ ಹೇಗೆ ಬದುಕಿದ್ದೇನೆ ಎಂಬದು ಮುಖ್ಯ. ಆಟೋ ಚಾಲಕರು ಊರಿನ ಜನರಪರ ಡ್ಯಾನ್ಸ್ ಮೇಳ ಏರ್ಪಡಿಸಿರುವದು ಶ್ಲಾಘನೀಯ ವಾದುದು. ಮುಖ್ಯಮಂತ್ರಿಗಳ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರೀತಿ ವಿಶ್ವಾಸದಿಂದ ಅಭಿವೃದ್ಧಿ ಪರ ಚಿಂತನೆಯಿಂದ ಒಗ್ಗಟ್ಟಾಗಿ ಕೆಲಸ ಮಾಡಿದರೆ ದೇಶದ ಪ್ರಗತಿಗೆ ನಾವು ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ 69ನೇ ಗಣರಾಜ್ಯೋತ್ಸವದ ಅಂಗವಾಗಿ ಆಟೋ ಚಾಲಕ, ಮಾಲೀಕ ಸಂಘದವರು ಮಕ್ಕಳಲ್ಲಿ ಯುವಜನತೆಯಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ಡ್ಯಾನ್ಸ್ ಮೇಳ ಆಯೋಜಿಸಿದ್ದು, ಸ್ತುತ್ಯಾರ್ಹವಾಗಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು, ತನಗೆ ಸಲ್ಲಿಸಿದ್ದ ಮನವಿಗೆ ಅನುಸಾರವಾಗಿ ಗ್ರಾ.ಪಂ. ಕಚೇರಿ ಕಟ್ಟಡ ನಿರ್ಮಿಸಲು ಶಾಸಕರ ನಿಧಿಯನ್ನು ನೀಡುತ್ತೇನೆ. ಹೈಮಾಸ್ಕ್ ದೀಪ ಅಳವಡಿಸಲು ಅನುದಾನ ದೊರಕಿಸಿಕೊಡುವದಾಗಿ ಭರವಸೆ ನೀಡಿದರು.

ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಕಲ್ಪಿಸಿದ ಆಟೋ ಚಾಲಕರ ಸಂಘದವರನ್ನು ಶ್ಲಾಘಿಸಿದರು. ಸುಂಟಿಕೊಪ್ಪ ಹೋಬಳಿಯಲ್ಲಿ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಕಂದಾಯ ಇಲಾಖೆಯವರು ವಶಪಡಿಸಿಕೊಂಡು ಸೂರು ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಮುಂದಾಗಬೇಕೆಂದರು.

ಜಿ.ಪಂ.ಸದಸ್ಯೆ ಕುಮುದಾ ಧರ್ಮಪ್ಪ ಮಾತನಾಡಿ 68ನೇ ಗಣರಾಜ್ಯೋತ್ಸವದ ಅಂಗವಾಗಿ ಆಟೋ ಚಾಲಕರ ಸಂಘದವರು ಉತ್ತಮ ಕಾರ್ಯಕ್ರಮ ನಡೆಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದರು.

ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಗಣರಾಜ್ಯೋತ್ಸವ ಅಂಗವಾಗಿ ಗ್ರಾಮದ ಜನತೆಗೆ ಮನರಂಜನೆ ನೀಡಲು ಮಕ್ಕಳ ಪ್ರತಿಭೆ ಪ್ರದರ್ಶಿಸಲು ಆಟೋ ಚಾಲಕರ ಸಂಘದವರು ಏರ್ಪಡಿಸಿದ್ದ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸಂಯುಕ್ತ ಸೌಧ ಸಭಾದ ನಿರ್ದೇಶಕ ಕೆ.ಸೂಗಪ್ಪ ಅವರು ಉತ್ತರ ಕರ್ನಾಟಕದಿಂದ 500ಕಿ.ಮೀ ಕ್ರಮಿಸಿ ಕಾವೇರಿ ನದಿಯ ಪುಣ್ಯ ಭೂಮಿಗೆ ಬಂದು ತಾನು ಇಲ್ಲಿನ ಪ್ರಕೃತಿ ಸೌಂದರ್ಯ ಮಕ್ಕಳ ಡ್ಯಾನ್ಸ್ ಕಾರ್ಯಕ್ರಮ ವೀಕ್ಷಿಸಿ ತುಂಬಾ ಆನಂದವಾಯಿತು. ಸೈನಿಕರ ಬೀಡಾದ ಕೊಡಗಿನಲ್ಲಿ ಹುಟ್ಟಿದವರು ಪುಣ್ಯವಂತರು ಈ ಡ್ಯಾನ್ಸ್‍ಮೇಳ ಕಾರ್ಯಕ್ರಮಕ್ಕೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದವರು “ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ” ಎಂದು ಹೆಸರಿಟ್ಟಿದ್ದರೆ ಒಳಿತಿತ್ತೆಂದು ಹೇಳಿದರು.

ವಕೀಲರೂ ಪ್ರಗತಿಪರ ಚಿಂತಕರೂ ಆದ ಕುಂಞÂ ಅಬ್ದುಲ್ಲಾ ಭಾರತ ಅತ್ಯಂತ ಶ್ರೀಮಂತ ರಾಷ್ಟ್ರ ಅಲ್ಲ ಆದರೂ ಪ್ರಪಂಚದ ಅನೇಕ ದೇಶದವರು ಬಾರತ ದೇಶವನ್ನು ಸೂಕ್ಷ್ಮವಾಗಿ ಹದ್ದುಗಣ್ಣಿನಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವದು ಎಲ್ಲಾ ಜಾತಿ ಮತ ಧರ್ಮ ಸಂಸ್ಕøತಿಯನ್ನು ಒಗ್ಗೂಡಿಸಿಕೊಂಡು ಹೋಗುತ್ತಿರುವ ಕೀರ್ತಿ ಭಾರತದ ಬಲಿಷ್ಠ ಸಂವಿಧಾನಕ್ಕೆ ಇದೆ ಎಂಬ ಕಾರಣಕ್ಕಾಗಿ ಇಲ್ಲಿನ ಆಟೊ ಚಾಲಕರೂ ಅದಕ್ಕೆ ಪೂರಕವಾದ ಸಮಾಜಮುಖಿ ಕೆಲಸ ಮಾಡಿದೆ ಎಂದು ಹೇಳಿದರು.

ಜಿ.ಪಂ. ಸದಸ್ಯ ಪಿ.ಎಂ.ಲತೀಫ್, ಹಾಸನ ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ಅಧ್ಯಕ್ಷ ಎ.ಲೋಕೇಶ್ ಕುಮಾರ್, ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ, ತಾ.ಪಂ.ಸದಸ್ಯೆ ವಿಮಲಾವತಿ, ಕೊಡಗು ಜಿಲ್ಲಾ ಕಾರ್ಮಿಕ ಚಾಲಕರ ಸಂಘದ ಅಧ್ಯಕ್ಷ ಅಣ್ಣ ಶರೀಪ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಸ್.ರವಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಎ. ಉಸ್ಮಾನ್, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯರು ಗಳಾದ ಶಿವಮ್ಮ, ನಾಗರತ್ನ, ವಳ್ಳಿ, ಶೋಭಾರವಿ, ಸೋಮಯ್ಯ, ಬಿ.ಎಂ. ಸುರೇಶ, ಗಂಗಮ್ಮ, ಜ್ಯೋತಿ, ಸಿ.ಚಂದ್ರ, ಕಂಬಿಬಾಣೆ ಗ್ರಾ.ಪಂ.ಸದಸ್ಯ ಆನಂದ, ವೀರಾಜಪೇಟೆ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ದಾಮೋಧರ, ಸುಂಟಿಕೊಪ್ಪ ವಕ್ರ್ಸ್‍ಶಾಫ್ ಸಂಘದ ಅಧ್ಯಕ್ಷ ಎ. ಸಂತೋಷ್, ಮಾಜಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ಆರ್. ಸಂತೋಷ್, ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕ ಮತ್ತು ಮಾಲೀಕ ಸಂಘದ ಅಧ್ಯಕ್ಷ ಎಸ್.ಎಸ್.ಮುಸ್ತಫಾ, ಗೌರವ ಅಧ್ಯಕ್ಷ ಬಿ.ಎಂ. ರವೀಂದ್ರ, ಕಾರ್ಯದರ್ಶಿ ಎಂ.ಎ. ಅಂತೋನಿ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಪ್ರವೀಣ್, ಖಜಾಂಚಿ ಕೆ.ಎಸ್. ಸಂದೀಪ್, ಸಹಕಾರ್ಯದರ್ಶಿ ವಿನೋದ್ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್, ವಿನುಕುಮಾರ್, ಪ್ರವೀಣ್, ಕೆ.ಆರ್.ಲೋಕೇಶ್, ನೌಷಾದ್ (ಮೋಣು) ಸಲಹೆಗಾರರಾದ ಗ್ಯಾಬ್ರಿಯಲ್ ಡಿಸೋಜ, ಎಸ್.ಎ. ಫರೀದ್, ಎಸ್.ಎ. , ಶಿವರಾಮ್ (ಶಿವಮಣಿ) ಕೆ.ಎಂ. ಮೋಣು ಹಾಗೂ ಸದಸ್ಯರುಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಡ್ಯಾನ್ಸ್ ಪ್ರದರ್ಶನ ಪ್ರೇಕ್ಷಕರ ಮನಗೆದ್ದಿತು. ಪ್ರಾರ್ಥನೆ ಅರ್ಶಿತಾ, ಸ್ವಾಗತನೃತ್ಯ ಐಶ್ವರ್ಯ, ನಿತ್ಯಾ, ಸ್ವಾಗತ ಎಂ.ಎ. ಉಸ್ಮಾನ್ ಹಾಗೂ ಕಾರ್ಯಕ್ರಮ ನಿರೂಪಣೆ ಡಿ.ಎಂ. ಮಂಜುನಾಥ್ ನೆರವೇರಿಸಿದರು.