ಚೆಟ್ಟಳ್ಳಿ, ನ. 12: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಚೆಂಬೆಬೆಳ್ಳೂರಿನ ಕೊಡವ ಅಸೋಸಿ ಯೇಶನ್ ವತಿಯಿಂದ ಹಮ್ಮಿಕೊಳ್ಳ ಲಾಗಿರುವ ಆಟ್-ಪಾಟ್-ಪಡಿಪು ಶಿಬಿರ ಚೆಂಬೆಬೆಳ್ಳೂರಿನ ಮಹಿಳಾ ಸಮಾಜದಲ್ಲಿ ಉದ್ಘಾಟನೆಗೊಂಡಿತು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಡವರಿಗೆ ದಾಖಲೆ ಎಂಬದೇ ಈ ಮಂದ್ ಮಾನಿ, ಆಟ್-ಪಾಟ್. ಇವೆಲ್ಲವನ್ನು ಇಂತಹ ಹಲವು ಕಾರ್ಯಕ್ರಮಗಳ ಮೂಲಕ ಉಳಿಸಿ-ಬೆಳೆಸಿದರೆ ಮಾತ್ರ ನಮ್ಮ ಸಂಸ್ಕøತಿ ಉಳಿಯಲು ಸಾಧ್ಯ. ಗ್ರಾಮ-ಗ್ರಾಮಗಳಲ್ಲೂ ಇಂತಹ ಕಾರ್ಯಕ್ರಮವನ್ನು ನಡೆಸಿ ಮುಂದಿನ ಪೀಳಿಗೆಗೆ ತಿಳಿಸಬೇಕು. ಇಲ್ಲವಾದರೆ ಮುಂದೊಂದು ದಿನ ಮಕ್ಕಳು ನಮ್ಮನ್ನು ಪ್ರಶ್ನಿಸುವ ಪರಿಸ್ಥಿತಿ ಒದಗಿ ಬರುತ್ತದೆಂದು ಅವರು ಹೇಳಿದರು.
ನಮ್ಮ ಸಂಸ್ಕøತಿ ಡೆಲ್ಲಿಯಿಂದ-ಹಳ್ಳಿಯವರೆಗೂ ಪಸರಿಸಿರುವದು ನಮಗೆಲ್ಲ ಹೆಮ್ಮೆಯ ವಿಷಯವೆಂದು ಮುಲ್ಲೆಂಗಡ ಚೋಂದಮ್ಮ ಆಟ್-ಪಾಟ್ ವಿಷಯದ ಬಗ್ಗೆ ತಿಳಿಸಿದರು. ಮುಂಡಚಾಡಿರ ರೆನ್ನಿ ಮಕ್ಕಳಿಗೆ ಆಟ್-ಪಾಟ್ ತರಬೇತಿ ನೀಡುವ ಮೂಲಕ ಚಾಲನೆ ನೀಡಿದರು.
ಈ ಆಟ್-ಪಾಟ್-ಪಡಿಪು ಕಾರ್ಯಕ್ರಮ 15 ದಿನಗಳವರೆಗೆ ನಡೆಯಲಿದ್ದು, ತಾ. 20 ರಂದು ಸಮಾರೋಪ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯರಾದ ಚೆಂಬಾಂಡ ಬೆಳ್ಯಪ್ಪ, ಕೊಡವ ಅಸೋಸಿಯೇಶನ್ ಅಧ್ಯಕ್ಷ ಚೆಂಬಾಂಡ ಮುದ್ದಪ್ಪ, ಊರಿನ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ, ಹಿರಿಯರಾದ ಚೇಂದಂಡ ಪೊನ್ನಪ್ಪ, ಶಿಕ್ಷಕಿ ಸೋಮೆಯಂಡ ಪಾರ್ವತಿ ಬೆಳ್ಯಪ್ಪ, ಮಹಿಳಾ ಸಮಾಜದ ಅಧ್ಯಕ್ಷೆ ಮಂಡೆಪಂಡ ಸುಮಿತ್ರ, ಸೋಮೆಯಂಡ ಬೋಸ್ ಬೆಳ್ಳಿಯಪ್ಪ, ಮಂಡೇಪಂಡ ಡಾಲಿ ಮಾದಯ್ಯ, ಚೇಂದಂಡ ನವೀನ್, ರಾಜು ಭೀಮಯ್ಯ, ಚೇಂದಂಡ ಬೋಪಣ್ಣ, ಮಚ್ಚಮಾಡ ರವಿ, ಸೋಮೆಯಂಡ ಸಂಪತ್, ಸೋಮೆಯಂಡ ನಂದ, ಉಳ್ಳಿಯಡ ಜೀವನ್, ಪೂತೆರ ಪ್ರಭು, ಸೋಮೆಯಂಡ ಗಿಣಿ, ಸಂಘದ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು. ಚೇಂದಂಡ ಪಾಯಲ್ ಪ್ರಾರ್ಥಿಸಿ, ಮಂಡೆಪಂಡ ಸುಮಿತ್ರ ಸ್ವಾಗತಿಸಿ, ಚೆಂಬಾಂಡ ಮುದ್ದಪ್ಪ ವಂದಿಸಿ, ಸೋಮೆಯಂಡ ಪಾರ್ವತಿ ಬೆಳ್ಳಪ್ಪ ನಿರೂಪಿಸಿದರು.