*ಗೋಣಿಕೊಪ್ಪ, ಸೆ. 28: ಸೌತ್ ಕೂರ್ಗ್ ಪಾರ್ಮಸ್ ಅಸೋಸಿ ಯೇಷನ್ನ ವತಿಯಿಂದ 14ನೇ ವರ್ಷದ ರಾಷ್ಟ್ರ ಮಟ್ಟದ ದ್ವಿಚಕ್ರ ಮತ್ತು ಚತುರ್ಚಕ್ರ ಆಟೋಕ್ರಾಸ್ 2016 ಸ್ಪರ್ಧೆಯನ್ನು ಅಕ್ಟೋಬರ್ 1 ಮತ್ತು 2 ರಂದು ಗೋಣಿಕೊಪ್ಪÀಲಿನ ಹರೀಶ್ಚಂದ್ರ ಪುರದ ಮನೆಯಪಂಡ ಅಯ್ಯಪ್ಪ ಅವರ ಜಾಗÀದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿದೆರ್Éೀಶಕ ಗುಮ್ಮಟೀರ ಕಿಲನ್ ಗಣಪತಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರ್ಯಾಲಿಯಲ್ಲಿ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರ್ಯಾಲಿ ಪಟುಗಳೊಂದಿಗೆ ಜಿಲ್ಲೆಯ ಮತ್ತು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ರ್ಯಾಲಿ ಪಟುಗಳು ಆಗಮಿಸಲಿದ್ದು, ಈಗಾಗಲೇ ಸುಮಾರು 60 ಸ್ಪರ್ಧಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದರು.
ಸಿ.ಕೆ. ಬೋಪಣ್ಣ ಮಾತನಾಡಿ, ಈ ಬಾರಿ ಆಟೋಕ್ರಾಸ್ ಅದ್ಧೂರಿ ಯಾಗಿ ನಡೆಸಲು ತೀರ್ಮಾನಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ 3.25 ಲಕ್ಷ ನಗದು ಬಹುಮಾನ ದೊಂದಿಗೆ ಆಕರ್ಷಕ ಟ್ರೋಫಿ ಗಳನ್ನು ವಿತರಿಸಲಾಗುವದು. ಆಟೋ ಕ್ರಾಸ್ನ್ನು ಯಶಸ್ವಿಯಾಗಿ ನಡೆಸಲು ಶ್ರೀ ಕಾವೇರಿ ದಸರಾ ಸಮಿತಿಯವರು ಕೈ ಜೋಡಿಸುತ್ತಿದ್ದಾರೆ. ಈ ವರ್ಷ ಆಟೋಕ್ರಾಸ್ 2016 ರಲ್ಲಿ ನಡೆಯುವ ಸ್ಪರ್ಧೆಯಲ್ಲಿ ಚಿತ್ರೀಕರಿಸಿದ ಉತ್ತಮ ಛಾಯಾ ಚಿತ್ರಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಛಾಯಾಚಿತ್ರಕ್ಕೆ ನಗದು ಬಹುಮಾನ ದೊಂದಿಗೆ ಪಾರಿತೋಷಕವನ್ನು ನೀಡಲಾಗುವದು ಎಂದು ತಿಳಿಸಿದರು.
ಮುಕ್ಕಾಟೀರ ಪೂವಯ್ಯ ಮಾತನಾಡಿ, ಈ ಬಾರಿ 2 ದಿನಗಳ ರ್ಯಾಲಿಯಲ್ಲಿ ಪ್ರಥಮ ದಿನ 4 ಚಕ್ರ ವಾಹನಗಳಲ್ಲಿ 13 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 800ಸಿ.ಸಿ 1300 ಸಿ.ಸಿ ನಾಮಿಸ್ ಕ್ಲಾಸ್ ಕೂರ್ಗ್ ಓಪನ್ ಇಂಡಿಯನ್ಜಪನ್, ಜಿಪ್ಸಿ ಕ್ಲಾಸ್, ಜೀಪ್ ಕ್ಲಾಸ್, ಲೇಡಿಸ್ ಕ್ಲಾಸ್, ಡಿಸಲ್ ಕ್ಲಾಸ್, ಅನ್ರಿಸ್ಟ್ರಿಟೆಡ್ ಕ್ಲಾಸ್, ರೇಸ್ ಫಾರ್ ರೋಲ್ ಕೇಬ್ ಕ್ಲಾಸ್ ನಡೆಯಲಿದೆ.
2ನೇ ದಿನ ದ್ವಿಚಕ್ರ ರ್ಯಾಲಿಯಲ್ಲಿ ಕೂರ್ಗ್ಬಾಯ್ಸ್ ಓಪನ್, ಕೂರ್ಗ್ ನಾವಿಸ್ ಓಪನ್, ನ್ಯೂಬಾಯ್ಸ್ ನಾವಿಸ್ ಓಪನ್, ಟಿ.ವಿಎಸ್ ಓಪನ್, 4 ಸ್ಟ್ರೋಕ್ ಓಪನ್, 2 ಸ್ಟ್ರೋಕ್ ಓಪನ್, ಮಾಡಿಫೈಡ್ ಓಪನ್, ಟಿವಿಎಸ್ ಮೋಪೇಡ್ ಕ್ಲಾಸ್, ಸ್ಕೂಟರ್ ಓಪನ್ ಕ್ಲಾಸ್, ಕೆ.ಟಿಎಂ ಡ್ಯೂಕ್ ಓಪನ್, ಬುಲೆಟ್ ಓಪನ್, ಇಂಡಿಯನ್ ಓಪನ್ ಹಾಗೂ ಇಂಡಿಯನ್ ಎಕ್ಸ್ಪರ್ಟ್ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಕಿಲನ್ ಗಣಪತಿ: 9448517570, ಮಿಟ್ಟು ಗಣಪತಿ: 9880548128, ಸಿ.ಎ ಮಾಚಯ್ಯ: 9448448399 ಇವರುಗಳನ್ನು ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದ್ದಾರೆ.