ಮಡಿಕೇರಿ, ಅ. 15: ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ಸಿವಿಲ್), ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ವೈರ್‍ಲೆಸ್), ರಿಸರ್ವ್ ಸಬ್-ಇನ್ಸ್‍ಪೆಕ್ಟರ್ (ಸಿಎಆರ್/ಡಿಎಆರ್), ಸ್ಪೆಷಲ್ ರಿಸರ್ವ್ ಸಬ್-ಇನ್ಸ್‍ಪೆಕ್ಟರ್ (ಕೆ.ಎಸ್.ಆರ್.ಪಿ) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. 13 ರಂದು ನಿಗದಿಗೊಳಿಸಲಾಗಿತ್ತು. ಸತತವಾಗಿ 5 ದಿನಗಳು ಬ್ಯಾಂಕ್ ರಜೆ ಇದ್ದುದರಿಂದ ಹಾಗೂ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಅರ್ಜಿ ಸಲ್ಲಿಸಲು ತಾ. 18 ರ ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಅರ್ಜಿ ಶುಲ್ಕವನ್ನು ತಾ. 19 ರಂದು ಬ್ಯಾಂಕ್ ವ್ಯವಹರಿಸುವ ಅವಧಿಯಲ್ಲಿ ಸಂಬಂಧಪಟ್ಟ ಬ್ಯಾಂಕ್‍ನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ. ಇದಲ್ಲದೇ ಅರ್ಜಿ ಸಲ್ಲಿಸುವ ನಿಯಮಗಳಲ್ಲಿ ಯಾವದೇ ಬದಲಾವಣೆಗಳು ಇರುವದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.