ಮಡಿಕೇರಿ, ಸೆ. 12 : ವಿವಿಧ ಸಂದರ್ಭಗಳಲ್ಲಿ ಹಿರಿಯರು ಮಾಡುತ್ತಿದ್ದ ವೈವಿಧ್ಯಮಯ ಅಡುಗೆಯ ಬಗ್ಗೆ ತರಬೇತಿಯನ್ನು ನೀಡುವ ‘ಅರೆ ಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡಿಗೆ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಮರಗೋಡು ಗೌಡ ಸಮಾಜದ ಸಹಯೋಗ ದೊಂದಿಗೆ ಮರಗೋಡಿನಲ್ಲಿ ನಡೆಸಲು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಸೆ.13 ರಿಂದ 18 ರವರೆಗೆ ತರಬೇತಿ ನಡೆಯಲಿದೆ ಎಂದರು. ಆಧುನೀಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕವಾದ ಪÀÅರಾತನ ಅಡುಗೆ ಪದ್ಧತಿಯ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಇದಾಗಿದ್ದು, ಗೌಡ ಸಮಾಜದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 150 ರಿಂದ 200 ಮಂದಿ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಬದಲಾದ ಸಾಮಾಜಿಕ ಪರಿಸ್ಥಿತಿಗಳ ನಡುವೆ ಈ ನೆಲದ ಆಹಾರ ಪದ್ಧತಿಗಳು ತೆರೆಮರೆಗೆ ಸರಿಯುತ್ತಿವೆ. ಇದನ್ನು ಗಮನಿಸಿ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿರು ವದಾಗಿ ಕೊಲ್ಯದ ಗಿರೀಶ್ ತಿಳಿಸಿದರು.

ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡುಗೆ ಕಾರ್ಯಕ್ರಮವನ್ನು ಸೆ.13 ರಂದು ಮಧ್ಯಾಹ್ನ 2 ಗಂಟೆಗೆ ಮರಗೋಡು ಗೌಡ ಸಮಾಜದ ಅಧ್ಯಕ್ಷ ದೇವಜನ ನಾಣಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮರಗೊಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿದ್ರುಪಣೆ ಮೋಹನ್, ಮಡಿಕೆÉೀರಿ ತಾಲೂಕು ಪಂಚಾಯ್ತಿ ಅಧ್ಯಕ್ಷ ತೆಕ್ಕಡೆ ಶೋಭಾ ಮೋಹನ್, ಮರಗೊಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಕುಂಜಿಲನ ಮುತ್ತಮ್ಮ, ಸಾಂಪ್ರದಾಯಿಕ ಹಳೇ ಸಾಮಗ್ರಿ ಸಂಗ್ರಹಕಾರರಾದ ತೋಟಂಬೈಲು ಪಾರ್ವತಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಲ್ಯದ ಗಿರೀಶ್ ಮಾಹಿತಿ ನೀಡಿದರು.

ತರಬೇತಿ ಮತ್ತು ಪ್ರಾತ್ಯಕ್ಷಿಕೆ ಪ್ರತಿನಿತ್ಯ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಸೆ.18 ರಂದು ಕಾರ್ಯಕ್ರಮ ಸಮಾರೋಪ ಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಮಂದ್ರೀರ ಮೋಹನ್‍ದಾಸ್, ಮರಗೋಡು ಗೌಡ ಸಮಾಜದ ಅಧ್ಯಕ್ಷರಾದ ದೇವಜನ ನಾಣಯ್ಯ, ಉಪಾಧ್ಯಕ್ಷ ಕಟ್ಟೆಮನೆ ಜನಾರ್ಧನ ಹಾಗೂ ಅಕಾಡೆಮಿ ಸದಸ್ಯ ಕುಡೆಕಲ್ ಸಂತೋಷ್ ಉಪಸ್ಥಿತರಿದ್ದರು.