ವೀರಾಜಪೇಟೆ, ಅ. 20: ಕಳೆದ 38 ವರ್ಷಗಳ ಹಿಂದೆ ತಿತಿಮತಿಯ ದೇವಮಚ್ಚಿ ಅರಣ್ಯದಿಂದ ಪುನರ್ವಸತಿ ಯೋಜನೆ ಮೇರೆ 166 ಕುಟುಂಬಗಳನ್ನು ಸ್ಥಳಾಂತರಿಸಿ ಅವರಿಗೆ ಭರವಸೆಯಂತೆ ಮೂಲ ಸೌಲಭ್ಯಗಳನ್ನು ಹಾಗೂ 5 ಎಕರೆ ಜಾಗವನ್ನು ನೀಡದೆ ವಂಚಿಸಿದ ಆರೋಪದ ಮೇರೆ ಜಾತ್ಯತೀತ ಜನತಾದಳದಿಂದ ಅರಣ್ಯ ಇಲಾಖೆ ವಿರುದ್ಧ ನಿರಂತರ ಹೋರಾಟ ಹಾಗೂ ನ್ಯಾಯ ದೇಗುಲಗಳ ಮೊರೆ ಹೋಗಿ ಉಚ್ಛ ನ್ಯಾಯಾಲಯದಲ್ಲಿಯೂ ಕಾನೂನು ಹೋರಾಟ ನಡೆಸಲಾಗುವದು ಎಂದು ಪಕ್ಷದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಚನ್ನಯ್ಯನಕೋಟೆ ವ್ಯಾಪ್ತಿಯ ಗೂಡ್ಲೂರು ಚನ್ನಂಗಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಕೇತ್ ಅವರು ಇತ್ತೀಚೆಗೆ ಗೂಡ್ಲೂರಿನ ಬಿ.ಎಲ್. ನಾಣಯ್ಯ ಅವರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜರ್ಸಿ ಹಸುವನ್ನು ಹುಲಿ ಹತ್ಯೆಗೈದು ನಿರ್ಗತಿಕ ಕುಟುಂಬ ಜೀವನ ನಡೆಸಲು ಕಂಗಾಲಾದ
(ಮೊದಲ ಪುಟದಿಂದ) ಹಿನ್ನೆಲೆ ವೈಯಕ್ತಿಕವಾಗಿ ಅವರಿಗೆ ರೂ. 10,000 ನಗದು ಪರಿಹಾರ ನೀಡಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಅವರು, ಇತ್ತೀಚೆಗೆ ಪಕ್ಷದಿಂದ ವೀರಾಜಪೇಟೆ ಅರಣ್ಯ ವಿಭಾಗ ಕಚೇರಿ ಮುಂದೆ ಧರಣಿ ಮುಷ್ಕರ ನಡೆಸಿ ಹುಲಿ ಧಾಳಿ ಹಾಗೂ ಗೂಡ್ಲೂರು ಪುನರ್ವಸತಿ ಸಂತ್ರಸ್ತರ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಗಿದ್ದು, ಇದು ಸರ್ಕಾರದ ಪರಿಶೀಲನೆಯಲ್ಲಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂತ್ರಸ್ತರ ನ್ಯಾಯಯುತ ಬೇಡಿಕೆಗಾಗಿ ಗಡುವು ನೀಡಿ ಕಾನೂನಿನ ಜೊತೆಯಲ್ಲಿ ಹೋರಾಟ ನಡೆಸಲಾಗು ವದು. ಮುಂದಿನ ವಿಧಾನಸಭೆ ಚುನಾವಣೆಗೆ ಈ ವಿಭಾಗದ ಕಾರ್ಯಕರ್ತರು ಈಗಲೇ ಪೂರ್ವ ಭಾವಿ ಸಿದ್ಧತೆಯಲ್ಲಿ ತೊಡಗಬೇಕು. ಪಕ್ಷದ ರಾಜ್ಯ ನಾಯಕ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಪಣತೊಡಬೇಕು ಎಂದರು.
ಪಕ್ಷದ ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್ ಮಾತನಾಡಿ, ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕುಟುಂಬಗಳು ಬೀದಿ ಪಾಲಾಗಲು ಬಿಡುವದಿಲ್ಲ.
ಸರ್ಕಾರ ಹಾಗೂ ಇಲಾಖೆ ವಿರುದ್ಧ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಸಂಘಟಿತವಾಗಿ ಹೋರಾಟ ನಡೆಸಲಾಗುವದು. ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.
ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮನೆಯಪಂಡ ಸಿ. ಬೆಳ್ಳಿಯಪ್ಪ ಮಾತನಾಡಿ, ವಿಧಾನಸಭೆ ಚುನಾವಣೆಗೆ ಇನ್ನು ಅಲ್ಪಾವಧಿ ಇರುವಾಗಲೇ ತಾಲೂಕಿನಾದ್ಯಂತ ಪಕ್ಷವನ್ನು ಸಂಘಟಿಸುವ ಕಾರ್ಯ ಆರಂಭವಾಗಿದೆ.
ನಿಷ್ಕ್ರಿಂiÀiವಾಗಿರುವ ಎಲ್ಲಾ ನಿಷ್ಟಾವಂತ ಕಾರ್ಯಕರ್ತರಿಗೆ ಮುಕ್ತ ಅವಕಾಶ ನೀಡಲಾಗುವದು. ಅರಣ್ಯ ಇಲಾಖೆಯಿಂದ ಗೂಡ್ಲೂರು ಪುನರ್ವಸತಿ ಸಂತ್ರಸ್ತರಿಗೆ ಉಂಟಾಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವದು ಎಂದು ಹೇಳಿದರು.
ಕಾರ್ಯಕರ್ತರ ಸಭೆಯಲ್ಲಿ ಗೂಡ್ಲೂರು, ಚನ್ನಂಗಿ, ಮೂಡಾಬೈಲು ಹಾಗೂ ಪಕ್ಷದ ಕಾರ್ಯಕರ್ತರ ಪ್ರಮುಖರ ನ್ನೊಳಗೊಂಡ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಸಮಿತಿಯ ಹಿಂದುಳಿದ ವರ್ಗದ ಹೆಚ್.ಜಿ. ಗೋಪಾಲ್, ಪಿ.ವಿ. ರೆನ್ನಿ, ಸ್ಥಳೀಯ ಮುಖಂಡರುಗಳಾದ ವಿ.ಸಿ. ದೇವರಾಜ್, ಎಂ.ಕೆ. ವಸಂತ್, ಜಿ.ವಿ. ಸೋಮಯ್ಯ, ವಿ.ಕೆ. ಗಣಪತಿ, ರಾಮಕೃಷ್ಣ, ಪೊಯ್ಯಕಂಡಿ ಶಾಂತಿ, ಕುರಂಜಿ ಶಾಂತಿ, ಕುಯ್ಯಮುಡಿ ಉತ್ತಯ್ಯ, ಮುಕ್ಕಾಟಿರ ರಘುನಂದ, ಎಡಕೇರಿ ಬಾಲಕೃಷ್ಣ, ಜೆ.ಕೆ. ಬಸಪ್ಪ, ಕಾರ್ಯಕರ್ತರುಗಳು ಹಾಜರಿದ್ದರು.