ಕರೆಯಲಾದ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ 57 ಸೇತುವೆಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಇದೀಗ ಅನುದಾನ ಕುಂಠಿತವಾಗಿದೆ. ಕ್ಷೇತ್ರಗಳ ಅಭಿವೃದ್ಧಿಗೆ ಹಿಂದೆ ನೀಡಲಾಗುತ್ತಿದ್ದ ರೂ. 60 ಲಕ್ಷ ಅನುದಾನವನ್ನು ಇದೀಗ ರೂ. 30 ಲಕ್ಷಗಳಿಗೆ ಇಳಿಸಲಾಗಿದೆ. ಇದರಿಂದ ಕ್ಷೇತ್ರಗಳ ಅಭಿವೃದ್ಧಿ ಅಸಾಧ್ಯ ಎಂದರು.
ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪೊನ್ನಚಂಡ ಮಾದಪ್ಪ ಮತ್ತು ಪಳಂಗಪ್ಪ ಅವರು ಗ್ರಾಮಸ್ಥರ ಪರವಾಗಿ ಮಾತನಾಡಿ, ಗ್ರಾಮದ ರಸ್ತೆಗಳು ತೀವ್ರ ಹದಗೆಟಿದ್ದು ಇದರಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದು, ಜನಪ್ರತಿನಿಧಿಗಳು ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾ ಪ್ರಭು, ನರಿಯಂದಡ ಗ್ರ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಮಾತನಾಡಿ, ಗ್ರಾಮದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದರು.
ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಕಳೆದ ವರ್ಷ ಟಿಪ್ಪು ಗಲಭೆ ಸಂದರ್ಭ ಮೃತಪಟ್ಟ ದೇವಪಂಡ ಕುಟ್ಟಪ್ಪ ಅವರಿಗೆ ಸಭೆಯಲ್ಲಿ ಶಾಂತಿ ಕೋರಲಾಯಿತು. ಚೇನಂಡ ದೀನಾ ಚಂಗಪ್ಪ ಮನವಿ ಪತ್ರವನ್ನು ಗ್ರಾಮಸ್ಥರ ಪರವಾಗಿ ಶಾಸಕರಿಗೆ ನೀಡಿದರು. ಗ್ರಾಮದ ಹಿರಿಯ ಮಚ್ಚಂಡ ಮುದ್ದಯ್ಯ ರಾಮು ಅಧ್ಯಕ್ಯತೆ ವಹಿಸಿದ್ದರು. ಚೇನಂಡ ಲವ್ಲಿ ಶಿವಾಜಿ ಪ್ರಾರ್ಥಿಸಿ, ಚೇನಂಡ ಸಂಪತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು
- ದುಗ್ಗಳ ಸದಾನಂದ