ಮಡಿಕೇರಿ, ಅ. 14: ಅಪ್ರಾಪ್ತೆ ಬಾಲಕಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಂತೆ ಮಡಿಕೇರಿ ನಗರ ಠಾಣೆಯಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪೋಕ್ಸೋ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
10 ವರ್ಷ ಪ್ರಾಯದ ಬಾಲಕಿಯೋರ್ವಳನ್ನು ಕರೆದೊಯ್ದು ಇಸ್ಮಾಯಿಲ್ ಎಂಬ ಕಾಮುಕ ಈ ಪೈಶಾಚಿಕ ಕೃತ್ಯಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ವಿಷಯವರಿತ ಪೋಷಕರು ಆತನಿಗೆ ಧರ್ಮದೇಟು ನೀಡುವ ದರೊಂದಿಗೆ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. 45 ವರ್ಷ ಪ್ರಾಯದ ಇಸ್ಮಾಯಿಲ್ ಈಗಾಗಲೇ ಇಬ್ಬರನ್ನು ವಿವಾಹವಾಗಿದ್ದಾನೆನ್ನಲಾಗಿದೆ. ಈ ಬಗ್ಗೆ ಹಿಂದೂಪರ ಸಂಘಟನೆಗಳ ಪ್ರಮುಖರು ನಿನ್ನೆ ಠಾಣೆ ಎದುರು ಜಮಾಯಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.