ಶ್ರೀಮಂಗಲ, ಜ. 8: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಹಾಗೂ ಅವರ ಪತ್ನಿ ಪುಷ್ಪ ಮಂದಯ್ಯ ಇವರುಗಳು ಗಾಯಗೊಂಡಿದ್ದಾರೆ. ಕಟ್ಟಿಮಂದಯ್ಯ ದಂಪತಿ ಪೊನ್ನಂಪೇಟೆಯಿಂದ ಶ್ರೀಮಂಗಲಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹುದಿಕೇರಿಯಿಂದ ಗೋಣಿಕೊಪ್ಪದತ್ತ ಬರುತ್ತಿದ್ದ ಲಾರಿ ಹುದಿಕೇರಿ ಬಳಿ ಡಿಕ್ಕಿಯಾಗಿದೆ ಪರಿಣಾಮ ಕಟ್ಟಿಮಂದಯ್ಯ ಅವರ ಬಲಕಾಲು, ಎಡಕೈ ಮುರಿದಿದ್ದು, ಪುಷ್ಪ ಮಂದಯ್ಯ ಅವರ ತಲೆಗೆ ಗಾಯವಾಗಿದೆ. ಪೊನ್ನಂಪೇಟೆ ಶಾರದಾಶ್ರಮ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ.

.