ನಿರ್ಮಾಣಕ್ಕೆ ಯಾವದೇ ರೀತಿಯ ಪರವಾನಗಿ ನೀಡದಂತೆ ವಿಚಾರಗಳನ್ನು ಚರ್ಚಿಸಲಾಯಿತು. ನಿವೇಶನ ರಹಿತರಿಗೆ ಪಂಚಾಯಿತಿ ವತಿಯಿಂದ ನಿವೇಶನ ನೀಡುವ ಬಗ್ಗೆ ಸದಸ್ಯರಾದ ಟಿ.ಕೆ. ವಿಶ್ವನಾಥ್ ಹಾಗೂ ರವಿ, ರಾಮಚಂದ್ರ ಸಭೆಯಲ್ಲಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಹುದುಗೂರು, ಕೂಡಿಗೆ ಗ್ರಾಮಗಳಲ್ಲಿ ಇರುವ ಜಾಗದಲ್ಲಿ ನಿವೇಶನ ರಹಿತರಿಗೆ ಹಂತ ಹಂತವಾಗಿ ನಿವೇಶನ ನೀಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿ ಶುಚಿತ್ವ ಹಾಗೂ ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ವ್ಯವಸ್ಥೆಗೆ ಯಾವದೇ ರೀತಿಯ ಧೋರಣೆ ತಾಳದೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ತಿಳಿಸಲಾಯಿತು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಗನ್ ಮಾತನಾಡಿ, ಸಭೆಗೆ ಸರಕಾರಿ ಪತ್ರಗಳ ವಿಷಯವನ್ನು ತಿಳಿಸಿ, 94 ಸಿ ಸರಕಾರಿ ಜಾಗದಲ್ಲಿ ನಿವೇಶನ ಹಾಗೂ ಹಕ್ಕುಪತ್ರ ನೀಡುವ ಬಗ್ಗೆ ಮಾಹಿತಿ ನೀಡಿ, ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡಲಾಗುವದು. ಅಲ್ಲದೆ, ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿರುವ ಜನರಿಗೆ ಹಕ್ಕು ಪತ್ರ ನೀಡುವದು. ಗ್ರಾ.ಪಂ. ವ್ಯಾಪ್ತಿಯ ಸದಸ್ಯರ ಆದ್ಯತೆಯ ಮೇರೆಗೆ ಗ್ರಾಮ ವ್ಯಾಪ್ತಿಯ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವದು.

ಈಗಾಗಲೇ ಅನಧಿಕೃತ ಲೇಔಟ್‍ಗಳನ್ನು ನಿರ್ಮಾಣ ಗೊಳಿಸುತ್ತಿರುವವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಯಾವದೇ ಪರವಾನಿಗೆ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ. 14ನೇ ಹಣಕಾಸಿನ ಕ್ರಿಯಾಯೋಜನೆಯ ತಯಾರಿಸಿ, ಸದಸ್ಯರುಗಳ ಸಹಕಾರದೊಂದಿಗೆ ಗ್ರಾಮದ ಪ್ರಗತಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗುವದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್ ಮಾತನಾಡಿ, ಗ್ರಾಮದ ಪ್ರಗತಿಗೆ ಸರಕಾರದಿಂದ ಹೆಚ್ಚು ಅನುದಾನದ ಮೂಲವನ್ನು ತರುವಲ್ಲಿ ಸದಸ್ಯರುಗಳ ಪ್ರಯತ್ನ ಮುಖ್ಯವಾಗಿರುತ್ತದೆ.

ಹೆಚ್ಚು ಅನುದಾನವನ್ನು ಶಿಕ್ಷಣ ಸಂಸ್ಥೆಗಳ ಪ್ರಗತಿಗೆ ವಿನಿಯೋಗಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುವ ನಿಟ್ಟಿನಲ್ಲಿ ಸದಸ್ಯರು ಮುಂದಾಗಬೇಕೆಂದು ತಿಳಿಸಿದರು.

ಈ ಸಂದರ್ಭ ಸದಸ್ಯರಾದ ಮೋಹಿನಿ, ಕಲ್ಪನಾ, ಕೆ.ಟಿ. ಈರಯ್ಯ, ರಾಮಚಂದ್ರ, ಹೆಚ್.ಎಸ್. ರವಿ, ಟಿ.ಕೆ. ವಿಶ್ವನಾಥ್, ಕೆ.ವೈ. ರವಿ, ರತ್ನಮ್ಮ, ಪುಷ್ಪ, ಜಯಶ್ರೀ, ಕೆ.ಜೆ. ಮಂಜಯ್ಯ, ಕೆ.ಸಿ. ದಸ್ವಿ, ಕಾರ್ಯದರ್ಶಿ ಸ್ವಾಮಿ ನಾಯಕ್, ಕೆ.ಸಿ. ರವಿ ಉಪಸ್ಥಿತರಿದ್ದರು.ಕೂಡಿಗೆ, ಸೆ. 1: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಬೀದಿ ದೀಪ ಅಳವಡಿಸುವ ಬಗ್ಗೆ ಚರ್ಚೆ ಸೇರಿದಂತೆ ಅನಧಿಕೃತ ಲೇಔಟ್ ನಿರ್ಮಾಣದ ಬಗ್ಗೆ ಸದಸ್ಯರು ಸುಧೀರ್ಘ ಚರ್ಚೆ ನಡೆಸಿದರು. ಕಳೆದ ಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ವಿಷಯ ಹಾಗೂ ಅನಧಿಕೃತ ಲೇಔಟ್