ಪೊನ್ನಂಪೇಟೆ, ಆ. 19: ಅನ್ಯಾಯ ಮತ್ತು ಭ್ರಷ್ಟಚಾರದ ವಿರುದ್ಧ ನಿರಂತರವಾಗಿ ಹೋರಾಡುವ ಹಿರಿಯ ಮುತ್ಸದ್ದಿ ಎ.ಕೆ. ಸುಬ್ಬಯ್ಯ ಅವರ ವಿರುದ್ದ ಅನಗತ್ಯ ಟೀಕೆಗಳು ಇದೀಗ ಹೆಚ್ಚಾಗುತ್ತಿದೆ. ಈ ಟೀಕೆಗಳಲ್ಲಿ ಯಾವದೇ ಹುರುಳಿಲ್ಲ. ಸುಬ್ಬಯ್ಯನವರನ್ನು ವಿರೋಧಕ್ಕಾಗಿ ವಿರೋಧಿಸಿ ದ್ವೇಷದ ಹೇಳಿಕೆ ಮೂಲಕ ಅವರ ತೇಜೋವಧೆಗೆ ಯತ್ನಿಸಿದರೆ ಅದರಿಂದ ಯಾವದೇ ಫಲವಿಲ್ಲ. ಅಲ್ಲದೇ ಈ ರೀತಿಯ ಹೇಳಿಕೆ ಯಾರಿಗೂ ಶೋಭೆ ತರುವದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರೂ ಆಗಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮುಖಂಡ ಗೋಣಿಕೊಪ್ಪಲಿನ ವಿ.ಕೆ. ಪೋಕುಟ್ಟಿ ಅವರು ಹೇಳಿದ್ದಾರೆ.
ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಯಾರದೆ ವಿರುದ್ಧ ಹೇಳಿಕೆ ನೀಡುವದಿದ್ದರೆ ಅಥವಾ ಆರೋಪ ಮಾಡುವದಿದ್ದರೆ ಅವುಗಳಿಗೆಲ್ಲಾ ಸೈದ್ಧಾಂತಿಕ ಹಿನೆÀ್ನಲೆ ಇರಬೇಕು. ಕೇವಲ ವಿರೋಧಕ್ಕಾಗಿ ವಿರೋಧÀ ಸರಿಯಲ್ಲ. ಸುಬ್ಬಯ್ಯನವರ ವಿರುದ್ದ ಈ ಹಿಂದೆ ಆರೋಪ ಮಾಡಿದವರು ಇದೀಗ ಮಾಡುತ್ತಿರುವವರೆಲ್ಲರು ತಮಗೆ ಸಂಕಷ್ಟ ಬಂದಾಗ ಅವರ ಬಳಿಗೆ ತೆರಳಿ ಲಾಭ ಪಡೆದು ಕೊಳ್ಳುತ್ತಾರೆ. ಅವರಿಂದ ಸಂದರ್ಭಾನುಸಾರ ಲಾಭ ಪಡೆದುಕೊಳ್ಳುವದರಲ್ಲಿ ಯಾವದೇ ರಾಜಕೀಯ ಪಕ್ಷಗಳು ಹಿಂದೆ ಬಿದ್ದಿಲ್ಲ ಎನ್ನುವದನ್ನು ನೆನಪಿಸ ಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.