ಮೂರ್ನಾಡು, ಡಿ. 18 : ಇಲ್ಲಿನ ಗೌಡ ಸಮಾಜದಲ್ಲಿ ನೂತನವಾಗಿ ನಿರ್ಮಾಣವಾದ ಅತಿಥಿ ಗೃಹದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.
ಗೌಡ ಸಮಾಜದ ಮಾಜಿ ಅಧ್ಯಕ್ಷ ಕುಂತೋಡಿ ದೇವಯ್ಯ ಹಾಗೂ ಪಾಣತ್ತಲೆ ತಮ್ಮಯ್ಯ ಅವರು ನೂತನವಾಗಿ ನಿರ್ಮಿಸಲಾದ ಅತಿಥಿ ಗೃಹವನ್ನು ಉದ್ಘಾಟಿಸಿದರು. ಬಳಿಕ ಗೌಡಸಮಾಜದ ಅಧ್ಯಕ್ಷ ಚೆಟ್ಟಿಮಾಡ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಸಮಾರಂಭದಲ್ಲಿ ಕಟ್ಟಡ ಗುತ್ತಿಗೆದಾರ ಸುರೇಶ್ ಅವರನ್ನು ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗೌಡಸಮಾಜ ಉಪಾಧ್ಯಕ್ಷ ತೆಕ್ಕಡೆ ರಮೇಶ್, ಖಜಾಂಚಿ ದಂಬೆಕೋಡಿ ಸುಬ್ರಮಣಿ, ಕಾರ್ಯದರ್ಶಿ ಬೈಲೋಳಿ ವಿಶ್ವನಾಥ್, ಸದಸ್ಯರಾದ ತೆಕ್ಕಡೆ ತಿಮ್ಮಯ್ಯ, ಕೋರನ ಪ್ರಕಾಶ್, ಉಳುವಾರನ ರಾಧಕೃಷ್ಣ, ಚೆಟ್ಟಿಮಾಡ ಪ್ರಶಾಂತ್, ಪಾಣತ್ತಲೆ ಹರೀಶ್, ತೆಕ್ಕಡೆ ಪ್ರಸನ್ನ, ಚೀಯಂಡಿರ ಪ್ರದೀಪ್, ಬಿಳಿಯಾರ ವಸಂತ್, ಅಂಚೆಮನೆ ದಮಯಂತಿ, ಕುವೆಂಡ್ರ ಸುನಂದಿನಿ ಇತರರು ಹಾಜರಿದ್ದರು.