ಮಡಿಕೇರಿ, ನ. 20: ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 26ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಖಂಡ ಏಕಾಹ ಭಜನೆ ಹಾಗೂ ಕಾರ್ತಿಕ ದೀಪೋತ್ಸವ ಜರುಗಿತು.
ಶನಿವಾರಸಂತೆ ಆರ್ಥಿಕ ಸಲಹೆಗಾರ ಗೀತಾ ಗಿರೀಶ್ ಭದ್ರದೀಪ ಜ್ವಲನ ಮಾಡುವ ಮೂಲಕ ಅಖಂಡ ಏಕಾಹ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾನುವಾರ ಸಂಜೆ ಮಹಾಮಂಗಳಾರತಿ ಬಳಿಕ ಹಿರಿಯ ವಕೀಲ ಕೆ. ಡಬ್ಲ್ಯು ಬೋಪಯ್ಯ ಸಮಾರೋಪ ನುಡಿಯಾಡುವ ಮೂಲಕ ಮುಕ್ತಾಯಗೊಂಡಿತು. ಅಖಂಡ ಏಕಾಹ ಭಜನೆಯಲ್ಲಿ ಹೊರಜಿಲ್ಲೆ ಸೇರಿದಂತೆ ಜಿಲ್ಲೆಯ 23 ಭಜನಾ ತಂಡಗಳು ಪಾಲ್ಗೊಂಡಿದ್ದರು.
ಈ ಸಂದರ್ಭ ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಡಾ ಪಾಟ್ಕರ್ ಜಯಲಕ್ಷ್ಮಿ ಪಾಟ್ಕರ್, ಕೆ.ಕೆ. ಮಹೇಶ್‍ಕುಮಾರ್, ಚಂದ್ರಶೇಖರ್ ಹಾಗೂ ಇನ್ನಿತರರು ಇದ್ದರು.