ಶನಿವಾರಸಂತೆ, ಡಿ. 14: ಕೊಡ್ಲಿಪೇಟೆ ಸಮೀಪದ ಜೂನಿಯರ್ ಕಾಲೇಜಿನ ಬಳಿ (ಕೆಎ 13, ಬಿ-3560) ಹಾಗೂ (ಕೆಎ 14, ಎ-2304) ಎರಡು ಲಾರಿಗಳಲ್ಲಿ ರಹದಾರಿ ಉಲ್ಲಂಘಿಸಿ ಮರಳು ಸಾಗಾಟ ಮಾಡುತ್ತಿದ್ದಾಗ, ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ರಹದಾರಿ ಉಲ್ಲಂಘಿಸಿ ಮರಳು ಸಾಗಾಟ ಮಾಡುತ್ತಿದ್ದ ಕಲ್ಲಾರೆಕೊಪ್ಪಲು ಗ್ರಾಮದ ಚಾಲಕ ಯೋಗೇಶ ಹಾಗೂ ಬಿದಿರುಮಲ್ಲೆಕೊಪ್ಪಲು ಗ್ರಾಮದ ಚಾಲಕ ಬಿ.ಎಂ. ರವಿ ಇವರಿಬ್ಬರನ್ನು ಲಾರಿ, ಮರಳು ಸಹಿತ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕೆ ಮಡಿಕೇರಿಯ ಹಿರಿಯ ಭೂ ವಿಜ್ಞಾನ, ಗಣಿ ಅಂತರ್ ಜಲವಿಭಾಗದ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಎರಡು ಲಾರಿಗಳಿಗೆ ತಲಾ ರೂ. 25 ಸಾವಿರದಂತೆ ರೂ. 50 ಸಾವಿರ ದಂಡ ವಿಧಿಸಿದ್ದಾರೆ. ಚಾಲಕರುಗಳು ದಂಡ ಪಾವತಿಸಿ ಮರಳು ಸಹಿತ ಲಾರಿಗಳನ್ನು ಬಿಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಪ್ರದೀಪ್, ಬಸವರಾಜ ಶೆಟ್ಟಿ, ಹರೀಶ್ ಪಾಲ್ಗೊಂಡಿದ್ದರು.