ವೀರಾಜಪೇಟೆ, ಸೆ.4 : ವೀರಾಜಪೇಟೆ ಬಳಿಯ ಕದನೂರಿನ ಮೂಲಕ ಗುಂಡಿಗೆರೆ ಮಾರ್ಗವಾಗಿ ಕೇರಳಕ್ಕೆ ಯಾವದೇ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ಗ್ರಾಮದ ಯುವಕರ ತಂಡ ಹಿಡಿದು ಪೋಲಿಸರಿಗೆ ಒಪ್ಪಿಸಿದ ಮೇರೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ನಂ. ಕೆ.ಎ. 12 ಎ 5935 ಪಿಕ್ ಅಪ್ ವಾಹನ ಹಾಗೂ ಗೋವುಗಳನ್ನು ವಶಪಡಿಸಿ ಕೊಂಡಿರುವ ಪೊಲೀಸರು ವಾಹನದಲ್ಲಿದ್ದ ಗುಂಡಿಗೆರೆಯ ಅಬ್ಬಾಸ್ ಹಾಗೂ ಯೂಸೂಫ್ ಅವರುಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಗೋವುಗಳನ್ನು ಮೈಸೂರಿನ ಪಿಂಜರ್ ಪೋಲ್‍ಗೆ ಸಾಗಿಸಲಾಗಿದೆ.