ಮಡಿಕೇರಿ, ಡಿ. 9: ರೋಟರಿ ಮಿಸ್ಟಿಹಿಲ್ಸ್ ಮತ್ತು ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಪ್ರಾಯೋಜಿತ ಜಿಲ್ಲಾ ಮಟ್ಟದ ಅಂತರ ಶಾಲಾ ಎರಡು ದಿನದ ಹಾಕಿ ಕ್ರೀಡಾ ಕೂಟವನ್ನು ಇಂದು ರೋಟರಿ ವಲಯ ಉಪ ರಾಜ್ಯಪಾಲ ಡಾ. ಪ್ರಶಾಂತ್ ಉದ್ಘಾಟಿಸಿದರು.
ಜಿಲ್ಲೆಯ ಸುಮಾರು ಹದಿನಾರು ಶಾಲೆಗಳ, ಹಿರಿಯರ ಮತ್ತು ಕಿರಿಯರ ವಿಭಾಗದ ತಂಡಗಳು ಭಾಗಿಗಳಾಗಿವೆ. ಉದ್ಘಾಟಿಸಿ ಮಾತನಾಡಿದ ಡಾ. ಪ್ರಶಾಂತ್ ಕ್ರೀಡೆಯಿಂದ ಸಮತೋಲನ ಗಳಿಸುವ ‘ಸ್ಪೋಟ್ರ್ಸ್ ಸ್ಪಿರಿಟ್’ ಕಲಿಯ ಬೇಕೆಂದರು. ಉಪ ಪ್ರಾಂಶುಪಾಲೆ ವನಿತಾ ಚೆಂಗಪ್ಪ ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಕ್ರೀಡೆ ಸಹಕಾರಿ ಎಂದರು. ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮಾತನಾಡಿ, ಕ್ರೀಡೆಯಲ್ಲಿ ತೊಡಗಿಸಿಕೊಂಡಷ್ಟು ತಂಡಗಳಲ್ಲಿ ಮುಂದುವರಿಯುವ, ನಿಭಾಯಿಸುವ ಚಾತುರ್ಯ ಹೆಚ್ಚುತ್ತದೆಂದರು.
ಬಿ.ಜಿ. ಅನಂತ ಶಯನ, ದಿನೇಶ್, ಡಾ|| ನವೀನ್, ಸಂದೀಪ್, ರಾಜೇಶ್, ಕೃಷ್ಣವೇಣಿ ಪ್ರಸಾದ್, ರವಿ ಹಾಗೂ ಇತರರು ಹಾಜರಿದ್ದರು.