ವೀರಾಜಪೇಟೆ, ಸೆ.14: ಕಳೆದ ಒಂದು ತಿಂಗಳ ಹಿಂದೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ಪೊಲೀಸರ ತಂಡ 7ಮಂದಿ ಅಂತರ್ರಾಜ್ಯ ಡಕಾಯಿತರನ್ನು ಬಂಧಿಸಿ ಅವರ ಬಳಿ ಇದ್ದ ಡಕಾಯಿತಿ ಹಣ ನಗದು ರೂ ರೂ 29,73000 ಹಣವನ್ನು ಹಾಗೂ ಡಕಾಯಿತಿಗೆ ಬಳಸಿದ ಒಂದು ಜೈಲೋ, ಒಂದು ವೇಗನಾರ್ ಎರಡು ಪಲ್ಸರ್ ಬೈಕ್ಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ತಿಳಿಸಿದರು.ತಾ. 16.8.16 ರಂದು ಮಧ್ಯರಾತ್ರಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೇರಳದ ತಾಮರಚೇರಿಗೆ ಹೋಗುತ್ತಿದ್ದ ನಂ ಕೆ.ಎಲ್-57 ಎಂ-2587 ಇನೋವಾ ಕಾರನ್ನು ಹಿಂಭಾಲಿಸಿ ಬಂದ 16 ಮಂದಿ ಅಪರಿಚಿತರ ತಂಡ ರಾತ್ರಿ 12-45 ಗಂಟೆಗೆ ನಾಲ್ಕೇರಿ ಜಂಕ್ಷನ್ನಲ್ಲಿ ತಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆಸೀಫ್ ಎಂಬವನನ್ನು ಕಾರಿನಿಂದ ಎಳೆದೊಯ್ದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕಾರಿನಲ್ಲಿದ್ದ ಸೈಟು ಮಾರಾಟ ಮಾಡಿದ ರೂ 3800000 ನಗದು ಹಣವನ್ನು ದೋಚಿದ್ದರು. ಆಸೀಫ್ನ ಜೊತೆಯಲ್ಲಿದ್ದ ಇಬ್ಬರಿಗೂ ಡಕಾಯಿತರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೈಲೋ ಕಾರಿನಲ್ಲಿ ಬಂದ ಸುಮಾರು 10 ಮಂದಿ ಹಾಗೂ ವೇಗನಾರ್ನಲ್ಲಿ 4 ಮಂದಿ, ಪಲ್ಸ್ರ್ ಬೈಕ್ನಲ್ಲಿಯೂ 2 ಮಂದಿ ಸೇರಿದಂತೆ ಒಟ್ಟು 16 ಮಂದಿ ಹಣ ದರೋಡೆ ಮಾಡಿದ್ದಾರೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದರು.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾದ ನಂತರ ವೀರಾಜಪೇಟೆ ಡಿ.ವೈಎಸ್ಪಿ ನೇತೃತ್ವದಲ್ಲಿ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಯಿತು. ಈ ಪೈಕಿ ಒಂದು ತಂಡಕ್ಕೆ ಸಿಕ್ಕಿದ ಸುಳಿವಿನ ಮೇರೆ ತಮಿಳ್ನಾಡು ರಾಜ್ಯದ ಸೇಲಂ ಪಟ್ಟಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿಯಾದ ಕೇರಳದ ಇರಿಟ್ಟಿಯ ಚೀನಿಕಾಡು ಅಜಿತ್ನನ್ನು ವಶಕ್ಕೆ ಪಡೆದುಕೊಂಡು ಮಾಹಿತಿ ಕಲೆ ಹಾಕಿದಾಗ ಒಟ್ಟು 16ಮಂದಿ ಕೃತ್ಯದಲ್ಲಿ ಭಾಗಿಯಾಗಿ ರುವದು ಪತ್ತೆಯಾದ ನಂತರ ಪೊಲೀಸರ ತಂಡ ಅಜಿತ್ ಸೇರಿದಂತೆ ಒಟ್ಟು 7ಮಂದಿಯನ್ನು ಬಂಧಿಸಿ ದರೋಡೆ ಮಾಡಿ ಹಂಚಿಕೊಂಡಿದ್ದ ಅವರ ಬಳಿಯಲ್ಲಿದ್ದ ರೂ 29ಲಕ್ಷದ ಎಪ್ಪತ್ತು ಮೂರು ಸಾವಿರವನ್ನು ವಶಪಡಿಸಿ ಕೊಳ್ಳಲಾಯಿತು. ಉಳಿದ ಹಣ ಇನ್ನು 9 ಮಂದಿಯ ಬಳಿ ಇದ್ದು ಅವರ ವಿಳಾಸ ಇತರ ಮಾಹಿತಿಗಳು ಪೊಲೀಸರ ತನಿಖಾ ತಂಡಕ್ಕೆ ದೊರೆತಿದ್ದು ಸದ್ಯದಲ್ಲಿಯೇ 9 ಮಂದಿಯನ್ನು ಪೊಲೀಸರ ತಂಡ ಬಂಧಿಸಲಿದೆ. 16 ಮಂದಿ ಆರೋಪಿ ಗಳೆಲ್ಲರೂ ಕೇರಳ ರಾಜ್ಯಕ್ಕೆ ಸೇರಿದವ ರಾಗಿದ್ದು ಈ ಆರೋಪಿಗಳ ಮೇಲೆ ಕೇರಳದಲ್ಲಿಯೂ ಡಕಾಯಿತಿಯ ಕ್ರಿಮಿನಲ್ ಪ್ರಕರಣ ಗಳಿರುವದಾಗಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸಿನಿಮಿಯ ಮಾದರಿ ಯಲ್ಲಿ ದರೋಡೆ ಆರೋಪಿಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ಪೊಲೀಸ್ ಇಲಾಖೆವತಿಯಿಂದ ರೂ 10,000 ನಗದು ಬಹುಮಾನ ಘೋಷಿಸಲಾಗಿದೆ ಎಂದು ರಾಜೇಂದ್ರ ಪ್ರಸಾದ್ ತಿಳಿಸಿದರು.
ದರೋಡೆ ಪ್ರಕರಣದಲ್ಲಿ ಪೊಲೀಸರ ಮೂರು ತಂಡ ತಮಿಳುನಾಡು, ಕೇರಳದ ಕಣ್ಣಾನೂರು, ತಲಚೇರಿ, ಮಾನಂದವಾಡಿ, ತಾಮರಚೇರಿ ವಿವಿಧೆಡೆಗಳಲ್ಲಿ ಆರೋಪಿಗಳ ಪತ್ತೆಗಾಗಿ ಶೋಧನೆ ನಡೆಸಿದರೆ, ಕೇರಳದ ತಾಮರಚೇರಿಯ ಅಜಿತ್ ನೀಡಿದ ಸುಳಿವಿನ ಮೇರೆ ಕೇರಳದ ಕಣ್ಣಾನೂರು, ತಲಚೇರಿ, ಮಾನಂದವಾಡಿಗಳಲ್ಲಿ ಎರಡನೇ ಆರೋಪಿ ವಿಶಾಕ್, ಶರಣು ಕುಮಾರ್, ನಿಖಿಲ್ ಕುಮಾರ್, ಅರುಣ್ ಕುಮಾರ್, ಮುನಾಫ್, ಶೌಕತ್ ಇವರುಗಳನ್ನು ಬಂಧಿಸಲಾಗಿದೆ.
ಡಿವೈಎಸ್ಪಿ ನಾಗಪ್ಪ ಅವರ ನೇತೃತ್ವದ ತಂಡದಲ್ಲಿ ಕುಟ್ಟ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ್, ಗೋಣಿಕೊಪ್ಪದ ಪಿ.ಕೆ.ರಾಜು, ವೀರಾಜಪೇಟೆಯ ಶಾಂತಮಲ್ಲಪ್ಪ, ಎಸ್ಐ ಶ್ರೀಧರ್, ರವಿಕಿರಣ್, ಸಿಬ್ಬಂದಿಗಳಾದ ದೊಡ್ಡಯ್ಯ, ಟಿ.ಕೆ.ರವಿ, ದೇವರಾಜ್, ಎಂ.ಎಸ್.ರಂಜಿತ್, ಶರತ್, ಗಣೇಶ್, ಗಣಪತಿ ಸಿದ್ಧಾರ್ಥ, ಮನು, ದಿನೇಶ್, ಹಸೈನಾರ್, ತಮ್ಮಯ್ಯ, ಮಧು, ಧನಂಜಯ್ಯ, ಮಜೀದ್, ಕೃಷ್ಣಮೂರ್ತಿ, ಸುಕುಮಾರ್, ರಮೇಶ್, ವೀರೇಶ್ ಹಾಗೂ ರಾಮಕೃಷ್ಣ ಆರೋಪಿಗಳನ್ನು ಪತ್ತೆ ಹಚ್ಚಲು ಭಾಗಿಯಾಗಿದ್ದರು.