ಶ್ರೀಮಂಗಲ, ನ. 3 : ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಬಾಳುಗೋಡಿನ ಕೊಡವ ಸಾಂಸ್ಕøತಿಕ ಕೇಂದ್ರದ ಮೈದಾನದಲ್ಲಿ ಅಂತರ ಕೊಡವ ಸಮಾಜ ತಂಡಗಳ ನಡುವೆ ಹಾಕಿ ಪಂದ್ಯಾವಳಿಗೆ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಚಾಲನೆ ನೀಡಿದರು.

ಗುರುವಾರದಿಂದ ಭಾನುವಾರ ದವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ 14 ಕೊಡವ ಸಮಾಜಗಳ ತಂಡ ಭಾಗವಹಿಸಲಿವೆ. ಗೋಣಿಕೊಪ್ಪ, ಮರೆನಾಡ್ (ಬಿರುನಾಣಿ), ಆಯರನಾಡು (ವೀರಾಜಪೇಟೆ), ಮಡಿಕೇರಿ, ಕುಶಾಲನಗರ, ಶ್ರೀಮಂಗಲ, ವಿರಾಜಪೇಟೆ, ಮೈಸೂರು, ಪೊನ್ನಂಪೇಟೆ, ಮೂರ್ನಾಡು, ನಾಪೋಕ್ಲು, ಬೇಂಗ್‍ನಾಡ್ (ಚೇರಂಬಾಣೆ), ಅಮ್ಮತ್ತಿ, ಬೆಂಗಳೂರು ಕೊಡವ ಸಮಾಜದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಈ ಸಂದರ್ಭ ಆಟೋಟ ಸಮಿತಿ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ, ಸಂಚಾಲಕ ಕಂಬೀರಂಡ ಕಿಟ್ಟು ಕಾಳಪ್ಪ, ಬೊಳಿಯಂಗಡ ದಾದು ದೇವಯ್ಯ, ಕೊಡವ ಸಮಾಜ ಒಕ್ಕೂಟದ ಉಪಾಧ್ಯಕ್ಷರುಗಳಾದ ಕೊಂಗಂಡ ದೇವಯ್ಯ, ಮಲಚ್ಚೀರ ಬೋಸು, ಮಾಳೇಟಿರ ಅಭಿಮನ್ಯು ಕುಮಾರ್, ಮಂಡೇಡ ರವಿ ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮತ್ತಿತರರು ಹಾಜರಿದ್ದರು.

ಕ್ರೀಡಾ ಕೂಟ ಉದ್ಘಾಟನೆಗೆ ಮೊದಲು ಸಾಂಸ್ಕøತಿಕ ಕೇಂದ್ರದ ಆವರಣದಲ್ಲಿರುವ ಅಗ್ನಿ ಚಾಮುಂಡಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.