ಮಡಿಕೇರಿ, ಸೆ. 24: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನವೆಂಬರ್ 4, 5, 6 ರಂದು ಜರುಗುವ ಕೊಡವ ನಮ್ಮೆಯಲ್ಲಿ ಅಂತರ್ ಕೊಡವ ಸಮಾಜದ ವಾರ್ಷಿಕ ಕ್ರೀಡಾಕೂಟದ ಪೂರ್ವಭಾವಿ ಸಭೆ ಇತ್ತೀಚೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಾಕಿ, ಹಗ್ಗಜಗ್ಗಾಟ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆಯನ್ನು ಮೂರು ದಿನಗಳ ಕಾಲ ಬಾಳುಗೋಡು ಕೊಡವ ಸಮಾಜದ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಕ್ರೀಡಾಕೂಟದ ಅಧ್ಯಕ್ಷರಾಗಿ ಮೂಕೊಂಡ ಬೋಸ್ ದೇವಯ್ಯ, ಕಾರ್ಯದರ್ಶಿಯಾಗಿ ಕೋಟೆರ ರಘು ಕಾರ್ಯಪ್ಪ, ಸಂಚಾಲಕರಾಗಿ ಕಂಬೀರಂಡ ಕಿಟ್ಟು ಕಾಳಪ್ಪ ಹಾಗೂ ಬೊಳಿಯಂಗಡ ದಾದು ಪೂವಯ್ಯ, ಟೂರ್ನಮೆಂಟ್ ನಿರ್ದೇಶಕರಾಗಿ ಐನಂಡ ಜಪ್ಪು ಅಚ್ಚಪ್ಪ, ನಿರ್ದೇಶಕರಾಗಿ ಕೂತಂಡ ಸುರೇಶ್, ಬೊಳ್ಳಜಿರ ಬಿ. ಅಯ್ಯಪ್ಪ, ಕಾಟುಮಣಿಯಂಡ ಉಮೇಶ್, ಮಾದೆಯಂಡ ಸಂಪಿ ಪೂಣಚ್ಚ, ನಾಪಂಡ ಮಧು ಮಂದಣ್ಣ, ಅಚ್ಚಕಾಳೆರ ಮೊಣ್ಣಪ್ಪ, ಕಬ್ಬಚ್ಚೀರ ಜ್ಯೋತಿ ಉತ್ತಪ್ಪ, ಪಾಡೆಯಂಡ ಕಟ್ಟಿ, ಚಂದಪಂಡ ಪ್ರಿನ್ಸ್ ಕರುಂಬಯ್ಯ, ಕುಲ್ಲೇಟಿರ ಅಜಿತ್ ನಾಣಯ್ಯ ಅವರು ಆಯ್ಕೆಯಾಗಿದ್ದಾರೆ.