ಕುಶಾಲನಗರ, ಡಿ. 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ 1998-2000 ಸಾಲಿನ ಹಿರಿಯ ವಿದ್ಯಾರ್ಥಿಗಳು ಕ್ರಿಸ್‍ಮಸ್ ಹಾಗೂ ವಾಜಪೇಯಿ ಜನ್ಮ ದಿನಾಚರಣೆಯ ಅಂಗವಾಗಿ ಕುಶಾಲನಗರದ ಬೈಚನಹಳ್ಳಿ ಅಂಗನವಾಡಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ತಂಡದ ಸದಸ್ಯರುಗಳು ಅಂಗನವಾಡಿ ಕಟ್ಟಡ ಮತ್ತು ಕಾಂಪೌಂಡ್‍ಗೆ ಸುಣ್ಣ ಬಣ್ಣ ಬಳಿದರು. ಕಾರ್ಯಕ್ರಮವನ್ನು ಗಣಿತ ಉಪನ್ಯಾಸಕ ಪ್ರಸನ್ನ ಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದ ಆಯೋಜಕರು ಮತ್ತು ಕನ್ನಡ ಭಾರತಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಕಾನ್‍ಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಎಂ.ವಿ. ಮಂಜೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಾದ ವಕೀಲ ವೃತ್ತಿಯಲ್ಲಿರುವ ಅಭಿನಂದನ್, ಮುತ್ತೂಟ್ ಫಿನ್‍ಕಾರ್ಪ್‍ನ ವಿಜಯ್‍ಕುಮಾರ್, ಸರ್ಕಾರಿ ಶಾಲಾ ಶಿಕ್ಷಕಿಯರಾದ ಬಿಂದ್ಯಾ, ಸಜನಿ, ಕಾವ್ಯ, ಅಬಕಾರಿ ಇಲಾಖೆಯ ಸಿ.ವಿ. ರಾಘವೇಂದ್ರ ಮತ್ತು ಪೋಲಿಸ್ ಇಲಾಖೆಯ ಸುದೇಶ್ ಗೌಡ, ಸೀಕೋ ಸಂಸ್ಥೆಯ ನಿರ್ದೇಶಕರಾದ ಡಾ. ಬಿ.ಕೆ. ಹರೀಶ್ ಕುಮಾರ್, ಬಿ.ಎ. ಶಂಕರ್ ಪಾಲ್ಗೊಂಡಿದ್ದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚರಣ್ ಹಿರಿಯ ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಪ್ರಶಂಸಿಸಿದರು. ಹಿರಿಯ ಅಂಗನವಾಡಿ ಕಾರ್ಯಕರ್ತೆ ಶಾರದಮ್ಮ ಸೇರಿದಂತೆ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಇದ್ದರು.