ಮಡಿಕೇರಿ, ಜ. 17: ಸೋಮವಾರಪೇಟೆ ತಾಲೂಕಿನ ಬಸವೇಶ್ವರ ಬೀದಿ (ಸೋಮವಾರ ಪೇಟೆ), ಕೂತಿ ಮತ್ತು ನಲ್ಲೂರು, ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯ ಕರ್ತೆಯರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 10ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ಅದೇ ಗ್ರಾಮದ ಅದೇ ವಾರ್ಡ್‍ನವರಾಗಿರಬೇಕು. 18 ರಿಂದ 35 ವಯೋಮಿತಿಯವರಿರಬೇಕು. ಜಂಬೂರುಲೈನ್, ಚಿಕ್ಕ ತೋಳೂರು, ಕೂತಿ, ಹಾನಗಲ್ಲು, ಬಸವೇಶ್ವರ ಬೀದಿ (ಸೋಮವಾರಪೇಟೆ), ಗುಡುಗಳಲೆ, ಮುಳ್ಳೂರು-2, ಕಿತ್ತೂರು, ಮಾದೇಗೋಡು, ದೊಡ್ಡಳುವಾರ, ಮುತ್ತಪ್ಪ ಕಾಲೋನಿ (ಸುಂಟಿಕೊಪ್ಪ) (ಮುಸ್ಲಿಂ), ಹಾಲೇರಿ ಮತ್ತು ಚೆಟ್ಟಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಹಾಯಕಿ ಹುದ್ದೆಗೆ ಕನಿಷ್ಟ 4ನೇ ತರಗತಿ ಗರಿಷ್ಠ 9ನೇ ತರಗತಿ ಉತ್ತೀರ್ಣರಾಗಿದ್ದು, ಕಡ್ಡಾಯವಾಗಿ ಅದೇ ಗ್ರಾಮದ ಅದೇ ವಾರ್ಡ್‍ನವರಾಗಿರಬೇಕು. 18 ರಿಂದ 35 ವಯೋಮಿತಿಯವರಿರಬೇಕು. ಬಿಪಿಎಲ್ ಕಾರ್ಡ್, ಮೀಸಲಾತಿಗೆ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿಗಳನ್ನು ಸಲ್ಲಿಸಲು ದಿನಾಂಕ: 10.2.2017 ರ ಸಂಜೆ 4.30 ಗಂಟೆಯ ವರೆಗೆ ಅವಕಾಶ ಇರುತ್ತದೆ. ತದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸ ಲಾಗುವದಿಲ್ಲ. ಎಲ್ಲಾ ಆಗತ್ಯ ದಾಖಲಾತಿ ಗಳನ್ನು ಒಳಗೊಂಡ ಅರ್ಜಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸೋಮವಾರಪೇಟೆ ಇಲ್ಲಿ ಇಡಲಾಗುವ ಮೊಹರು ಮಾಡಲಾದ ಟೆಂಡರ್ ಪೆಟ್ಟಿಗೆಯೊಳಗೆ ಕಚೇರಿ ವೇಳೆಯಲ್ಲಿ ಹಾಕುವದು. ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಪರಿಗಣಿಸ ಲಾಗುವದಿಲ್ಲ. ಹೆಚ್ಚಿನ ಮಾಹಿತಿಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯವರ ಕಚೇರಿ, ಸೋಮವಾರಪೇಟೆ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದು. (ದೂರವಾಣಿ: 08276-282281).