ಆಲೂರು-ಸಿದ್ದಾಪುರ, ಆ. 14: ಸ್ತನ್ಯಪಾನ ತಾಯಿ-ಮಗುವಿನ ಬಾಂಧವ್ಯದ ವೃದ್ಧಿಗೆ ಸಹಕಾರಿ ಯಾಗುತ್ತದೆ ಎಂದು ಆಲೂರು -ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಸುಪರ್ಣ ಕೃಷ್ಣಾನಂದ್ ಅಭಿಪ್ರಾಯ ಪಟ್ಟರು.

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಅಂಕನಹಳ್ಳಿ ಸಮಿಪದ ಬಡಬನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಯಂದಿಯರಿಗೆ ಉಪನ್ಯಾಸ ನೀಡುತ್ತಿದ್ದರು. ಪ್ರತಿಯೊಂದು ಮಗುವಿಗೆ ಎದೆಹಾಲು ಜೀವದÀ ಸೆಲೆಯಾಗಿರುತ್ತದೆ ಮಗುವಿಗೆ ಎದೆ ಹಾಲಿನ ಸೇವನೆಯಿಂದ ಅದೊಂದು ಸಂಜೀವಿನಿಯ ಕಣವಾಗಿರುತ್ತದೆ, ಮಗುವಿನ ಆರೋಗ್ಯದ ಬೆಳವಣಿಗೆಗೂ ಪೂರಕವಾಗಿರುತ್ತದೆ, ತಾಯಿಯ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿಯ ಜೊತೆಯಲ್ಲಿ ಉತ್ತಮವಾದ ನೈಸರ್ಗಿಕ ಪೌಷ್ಠಿಕಾಂಶದ ಜೀವಕಣವನ್ನು ಒಳಗೊಂಡಿರುತ್ತದೆ, ಎದೆಹಾಲಿನಲ್ಲಿ ಎಷ್ಟೊಂದು ಲಾಭಾಂಶಗಳಿದ್ದರೂ ಇಂದು ಕೆಲವರಲ್ಲಿ ಸ್ತನ್ಯಪಾನದ ಬಗ್ಗೆ ತಪ್ಪು ಕಲ್ಪನೆಗಳು ಮನೆ ಮಾಡಿದೆ, ಇಂತಹ ತಪ್ಪು ಕಲ್ಪನೆಗಳಿಂದ ತಾಯಿಂದಿರು ಹೊರಬಂದು ನೈಸರ್ಗಿ ಕವಾದ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಹೊಂದ ಬೇಕಾಗಿದೆ, ಈ ನಿಟ್ಟಿನಲ್ಲಿ ತಾಯಂದಿರು ಎದೆ ಹಾಲು ಮಗುವಿಗೆ ಅವಶ್ಯಕವಾದ ಹಾಗೂ ಅತ್ಯಂತ ಪರಿಪೂರ್ಣವಾದ ಆಹಾರ ವಾಗಿರುತ್ತದೆ ಎಂಬದನ್ನು ಮನವರಿಕೆ ಮಾಡಿಕೊಂಡು ಸ್ತನ್ಯಪಾನವನ್ನು ಪ್ರೋತ್ಸಾಹಿಸುವದೊಂದಿಗೆ ಮಗುವಿನ ಆರೋಗ್ಯದ ಜೊತೆಯಲ್ಲಿ ತಾಯಿಯ ಅರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಸ್.ಬಿ. ಶಿವಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರು ಸರಕಾರದ ಸ್ವಚ್ಛ ಭಾರತ ಕಾರ್ಯ ಕ್ರಮವನ್ನು ಪ್ರೋತ್ಸಾಹಿಸಬೇಕು, ಸ್ವಚ್ಛತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿ ಕೊಂಡರೆ ರೋಗ-ರುಜಿನಗಳನ್ನು ಹರಡುವಂತಹ ಸೊಳ್ಳೆಗಳು ಉತ್ಪತ್ತಿಯಾಗುವದಿಲ್ಲ, ಇದರಿಂದ ಯಾವದೇ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುವದಿಲ್ಲ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತನ್ನ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದರ ಜೊತೆಯಲ್ಲಿ ಇಡೀ ಗ್ರಾಮವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸಿದರೆ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಯಶಸ್ಸು ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ರಾದ ಎಂ. ಶಶಿಕಲ, ಪಿ.ಪಿ. ನಮಿತ, ಅಂಗನವಾಡಿ ಕಾರ್ಯಕರ್ತೆ ಚಂದ್ರಕಲ, ಆಶಾ ಕಾರ್ಯ ಕರ್ತೆಯರಾದ ರಮ್ಯ, ಸುಮಿತ ಮುಂತಾದವರಿದ್ದರು.