ಮಡಿಕೇರಿ, ಸೆ. 10: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಗೋ-ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಮಡಿಕೇರಿಯಲ್ಲಿ ತಾ. 25 ರಂದು “ಗೋ ಹೆರಿಟೇಜ್ ರನ್-ಕೂರ್ಗ್” ಅನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿ’ಸೋಜಾ ತಿಳಿಸಿದ್ದಾರೆ.

ತಾ. 25 ರಂದು ಬೆಳಿಗ್ಗೆ 6.30 ಗಂಟೆಗೆ ಗೋ ಹೆರಿಟೇಜ್ ರನ್-ಕೂರ್ಗ್”ಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಿಂದ ಫ್ಲಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ “ ಗೋ ಹೆರಿಟೇಜ್ ರನ್-ಕೂರ್ಗ್” ಕಾರ್ಯಕ್ರಮವನ್ನು “ಜವಾಬ್ದಾರಿ ಯುತ-ಪರಿಸರ ಸ್ನೇಹಿ-ಪ್ರವಾಸೋದ್ಯಮ”ವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಹಾಗೂ ಆದಾಯ ಉತ್ತಮಗೊಳ್ಳುತ್ತದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ಆಯೋಜಿಸುವ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ “ಗೋ ಹೆರಿಟೇಜ್ ರನ್-ಕೂರ್ಗ್” ಕಾರ್ಯಕ್ರಮದಲ್ಲಿ ಭಾಗವಹಿಸುವದರ ಮೂಲಕ ಕೊಡಗು ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸು ವವರು 5 ಕಿ.ಮೀ, 10 ಕಿ.ಮೀ. ಹಾಗೂ 21 ಕಿ.ಮೀ.ಗಳ ಮ್ಯಾರಥಾನ್ ಓಟದಲ್ಲಿ ಭಾಗವಹಿಸಲು ಅವಕಾಶವಿದ್ದು, ಗೋ-ಯುನೆಸ್ಕೋ ಸಂಸ್ಥೆಯವರ ಅಂತರ್ಜಾಲ ತಾಣ goheಡಿiಣಚಿgeಡಿuಟಿ.ಛಿom/ಛಿooಡಿg ಮುಖಾಂತರ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಹಾಗೂ ಇದಕ್ಕೆ ಅಭ್ಯರ್ಥಿಗಳು ಗೋ-ಯುನೆಸ್ಕೋ ಸಂಸ್ಥೆಯವರು ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ. “ಜಿಲ್ಲೆಯ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅಔಔಖಉ250 ಕೋಡನ್ನು ಬಳಸಿ ನೋಂದಣಿ ಮಾಡಬೇಕಾಗಿರು ತ್ತದೆ. ಈ ಕಾರ್ಯಕ್ರಮದಲ್ಲಿ 500 ರಿಂದ 600 ಅಭ್ಯರ್ಥಿಗಳು ಭಾಗವಹಿಸ ಬಹುದು ಎಂದು ಅಂದಾಜಿಸ ಲಾಗಿದ್ದು, “ಗೋ ಹೆರಿಟೇಜ್ ರನ್-ಕೂರ್ಗ್” ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು goheಡಿiಣಚಿgeಡಿuಟಿ. ಛಿom/ಛಿooಡಿg ಅಂತರ್ಜಾಲ ತಾಣದ ಮುಖಾಂತರ ನೋಂದಾಯಿಸುವಂತೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.