ಸೋಮವಾರಪೇಟೆ, ಆ. 30: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಮತ್ತು ಹಗೆತನದ ರಾಜಕೀಯ ಇದೀಗ ಶಾಂತಿಯ ನಾಡಾಗಿದ್ದ ಕೊಡಗಿನಲ್ಲೂ ಕಂಡುಬರುತ್ತಿದೆ. ಮತಾಂಧತೆ ಸಾಮಾಜಿಕ ನೆಮ್ಮದಿಗೆ ಪಿಡುಗಾಗಿದೆ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್ ಆತಂಕ ವ್ಯಕ್ತಪಡಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ರಾಜಕಾರಣ ಮತ್ತು ಧರ್ಮದ ನಡುವೆ ಗಲಭೆಗಳು ನಡೆಯುತ್ತಿವೆ. ಹಿಂಸೆಗೆ ಹಿಂಸೆ, ಕೊಲೆಗೆ ಕೊಲೆ ಉತ್ತರವಲ್ಲ ಎಂಬದನ್ನು ಮನಗಾಣಬೇಕಿದೆ. ಪ್ರಜಾಸತ್ತಾತ್ಮಕ ಹೋರಾಟದ ಅನಿವಾರ್ಯತೆ ಎದುರಾಗಿದೆ ಎಂದು ಶಶಿಧರ್ ಹೇಳಿದರು.
ನಮ್ಮ ಧರ್ಮ ಶ್ರೇÀಷ್ಠ ಇನ್ನೊಬ್ಬರ ಧರ್ಮ ನಿಕೃಷ್ಟ ಎಂಬ ಭಾವನೆಗಳನ್ನು ಮೂಡಿಸಲಾಗುತ್ತಿದೆ. ದೇಶಭಕ್ತಿ, ರಾಷ್ಟ್ರಭಕ್ತಿ, ಧರ್ಮ, ಹಿಂದುತ್ವ, ಇಸ್ಲಾಂ, ಕ್ರೈಸ್ತ ಎಂಬ ಹೆಸರಿನಲ್ಲಿ ಕೊಲೆಗಳು ನಡೆದಾಗ ನಾಗರಿಕ ಸಮಾಜ ವಿರೋಧ ಮಾಡಬೇಕು ಎಂದು ಹೇಳಿದರು.
ಕೊಲೆಗಾರರು ಕಾನೂನಿನ ಬಿಗಿ ಕುಣಿಕೆಯಿಂದ ತಪ್ಪಿಸಿಕೊಳ್ಳಬಾರದು. ಕೊಲೆ ಮಾಡಿ ಬಚಾವಾಗಲು ಸಾಧ್ಯವಿಲ್ಲ ಎಂಬ ಸಂದೇಶ ಕಾನೂನನ್ನು ಕೈಗೆ ತೆಗೆದುಕೊಳ್ಳವವರಿಗೆ ತಲುಪಬೇಕು. ಕೊಲೆ ಮಾಡುವ ಹಾಗೂ ಕೊಲೆಗೆ ಪ್ರಚೋದನೆ ನೀಡುವ ಕೈಗಳಿಗೆ ಶಿಕ್ಷೆಯಾಗಬೇಕು. ಇಂತಹ ಸಂದೇಶ ರವಾನೆಯಾಗಬೇಕು ಎಂದ ಅವರು, ಕುಶಾಲನಗರ ಆಟೋ ಚಾಲಕ ಪ್ರವೀಣ್ ಪೂಜಾರಿ ಅವರನ್ನು ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧಿಸಿದ ಪೊಲೀಸರು ಅಭಿನಂದÀನಾರ್ಹರು ಎಂದು ಹೇಳಿದರು.
ಈ ಪ್ರಕರಣದ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಮರ್ಪಕ ಚಾರ್ಜ್ಶೀಟ್ ಸಲ್ಲಿಸಬೇಕು ಎಂದು ಆಗ್ರಹಿಸಿದರು. ದೆÉ್ವೀಷಗಳು ಇಂದು ಕೊಲೆಗಳಿಗೆ ಪರಿವರ್ತನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಾಂಬ್ ತಯಾರಿಕೆಯಾಗಬಹುದು ಎಂದು ಶಶಿಧರ್ ಆತಂಕ ವ್ಯಕ್ತಪಡಿಸಿದರಲ್ಲದೆ, ಇಂತಹ ಘಟನೆಗಳಿಂದ ಕೊಡಗಿನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು. ರಾಜಕಾರಣಕ್ಕಿಂತ ಮಿಗಿಲಾಗಿ ಜಿಲ್ಲೆಯ ಜನರಿಗೆ ಶಾಂತಿ ನೆಮ್ಮದಿ ಬೇಕು. ಗಲಾಟೆ, ಬಂದ್, ಕಫ್ರ್ಯೂ, ಪ್ರತಿದಿನ 144ಸೆಕ್ಷನ್ ಆದರೆ ಜಿಲ್ಲೆಯ ಅಭಿವೃದ್ಧಿ ನಾಶವಾಗುತ್ತದೆ. ಸಮಾಜ ಉಳಿದರೆ ದೇಶ ಉಳಿಯುತ್ತದೆ. ದೇಶ ಉಳಿದರೆ ಧರ್ಮ ಉಳಿಯುತ್ತದೆ. ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಚಳುವಳಿ, ಜನಾಂದೋಲನದ ಮೂಲಕ ಪ್ರಶ್ನೆ ಮಾಡಬೇಕು. ಆರೋಗ್ಯ ಪೂರ್ಣ ಸಮಾಜ ಕಟ್ಟಲು ಯುವಜನಾಂಗ ಮುಂದೆ ಬರಬೇಕು ಎಂದು ಅಭಿಪ್ರಾಯಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಮಿಕ ಘಟಕವನ್ನು ಬಲಿಷ್ಠವಾಗಿ ಕಟ್ಟಲಾಗು ವದು. ಈಗಾಗಲೇ ಮಡಿಕೇರಿ ಹಾಗೂ ಸೋಮವಾರ ಪೇಟೆ ಬ್ಲಾಕ್ಗಳಲ್ಲಿ ಸಮಿತಿ ರಚನೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ, ಗ್ರಾಮ ಪಂಚಾಯಿತಿ ಮತ್ತು ಬೂತ್ಮಟ್ಟದಲ್ಲಿ ಕಾರ್ಮಿಕರನ್ನು ಸಂಘಟಿಸಲಾಗು ವದೆಂದರು. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ವಿವಿಧ ಕಾರ್ಮಿಕ ಸಂಘಟನೆಗಳ ಸೆ.2ರಂದು ದೇಶ ವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಲಾಗುವದು. ತಾ. 2ರಂದು ಮಡಿಕೇರಿಯಲ್ಲಿ ನಡೆಯುವ ಕಾರ್ಮಿಕರ ಮುಷ್ಕರದಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕ ಭಾಗವಹಿಸಲಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಬಿ.ಇ.ಜಯೇಂದ್ರ, ಮಡಿಕೇರಿ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಪೂಣಚ್ಚ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎ.ನಾಗರಾಜು, ಪ್ರಮುಖರಾದ ಮುಕ್ರಂಬೇಗ್ ಬಾಬು ಇದ್ದರು.