ಭಾಗಮಂಡಲ, ಜೂ. 27: ಗ್ರಾ.ಪಂ. ಅಳವಡಿಸಿದ್ದ ಸೋಲಾರ್ ಬ್ಯಾಟರಿ ಹಾಗೂ ಸೋಲಾರ್ ಪ್ಲೇಟನ್ನು ಕಳವು ಮಾಡಿರುವ ಪ್ರಕರಣ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಚೇರಂಬಾಣೆ ಕೊಳಗದಾಳು ಭಗವತಿ ದೇವಸ್ಥಾನದ ಬಳಿ ಬೇಂಗೂರು-ಚೇರಂಬಾಣೆ ಗ್ರಾ.ಪಂ. ಅಳವಡಿಸಿದ್ದ ಸೋಲಾರ್ ದೀಪಕ್ಕೆ ಅಳವಡಿಸಿದ್ದ ಬ್ಯಾಟರಿ ಹಾಗೂ ಪ್ಲೇಟನ್ನು ಯಾರೋ ದುಷ್ಕರ್ಮಿಗಳು ಕಳವು ಮಾಡಿರುವದಾಗಿ ಗ್ರಾ.ಪಂ. ದೂರು ದಾಖಲಿಸಿದೆ.