ಸೋಮವಾರಪೇಟೆ, ಜು. 30: ಇಲ್ಲಿನ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎ.ಎಸ್. ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಚೌಟ ಪುನರಾಯ್ಕೆ ಯಾಗಿದ್ದಾರೆ.
ಖಜಾಂಚಿಯಾಗಿ ಕೆ.ಎನ್. ಜಗದೀಶ್, ಉಪಾಧ್ಯಕ್ಷರುಗಳಾಗಿ ಧನು ಕುಮಾರ್, ಎಚ್.ಬಿ. ಬಸಪ್ಪ, ಪದಾಧಿ ಕಾರಿಗಳಾಗಿ ಎ.ಆರ್. ಮುತ್ತಣ್ಣ, ಕೃಷ್ಣಕಾಂತ್, ಪಾಲಾಕ್ಷ, ಬಿ.ಎನ್. ಗಣಪತಿ, ಚಂದ್ರಪಾಲ್, ಕೆ.ವಿ. ಗಣೇಶ್, ಡಿ. ಲಿಂಗಪ್ಪ ಆಯ್ಕೆಯಾಗಿದ್ದಾರೆ.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಚ್.ಎಸ್. ಮಂಜುನಾಥ ಮೂರ್ತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಅವರು ಮಾತನಾಡಿ, 1917ರಲ್ಲಿ ಪ್ರಾರಂಭವಾದ ಲಯನ್ಸ್ ಸಂಸ್ಥೆ 100ನೇ ವರ್ಷಕ್ಕೆ ಕಾಲಿಟ್ಟಿದೆ. ಸಮಾಜ ಸೇವೆ ಹಾಗೂ ಯುವ ಸಮುದಾಯವನ್ನು ಸಮಾಜ ಸೇವೆಗೆ ಧುಮುಕಿಸುವಂತೆ ಪ್ರೇರೇಪಣೆ ನೀಡುತ್ತಿದೆ. ಲಯನ್ಸ್ ಸಂಸ್ಥೆಗೆ ಸೇರುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ನೂತನ ಅಧ್ಯಕ್ಷ ಎ.ಎಸ್. ಮಹೇಶ್ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಲಾಗುವದು ಎಂದರು. ಉಚಿತ ಆರೋಗ್ಯ ತಪಾಸಣಾ ಶಿಬಿರ, ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸುವದು ಸೇರಿದಂತೆ ಜನಪರ ಕೆಲಸಗಳನ್ನು ಲಯನ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.
ವೇದಿಕೆಯಲ್ಲಿ ವಲಯಾಧ್ಯಕ್ಷರಾದ ಧನು ಉತ್ತಯ್ಯ, ರಕ್ಷಿತ್, ಅಪ್ಪಣ್ಣ, ಪದಾಧಿಕಾರಿಗಳಾದ ಮೇಜರ್ ಮಂದಪ್ಪ, ಲೀಲಾರಾಮ್, ಜಲಜಾ ಶೇಖರ್, ಜಗದೀಶ್ ಕೆ.ಎಂ., ಪ್ರತಾಪ್ ಈರಪ್ಪ, ವಿಮಲಾ ಕೃಷ್ಣಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.