*ಗೋಣಿಕೊಪ್ಪಲು, ಜೂ. 12: ಯಾವ ಸಮಾಜ ಸಾಂಸ್ಕøತಿಕವಾಗಿ ಶ್ರೀಮಂತವಾಗಿದೆಯೋ ಅಂತಹ ಸಮಾಜ ಮಾನವ ಪರವಾಗಿರುತ್ತದೆ. ಜೊತೆಗೆ ಯುವ ಜನಾಂಗದ ಹೃದಯ ಶ್ರೀಮಂತಿಕೆಯನ್ನು ಬೆಳೆಸುತ್ತದೆ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜೆ. ಸೋಮಣ್ಣ ಹೇಳಿದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಮಹಾತ್ಮ ಗಾಂಧಿ ಸೋಷಿಯಲ್ ಆರ್ಗನೈ ಜೇಷನ್ ಹಾಗೂ ಪೊನ್ನಪ್ಪಸಂತೆ ಎಂಸಿಎಸ್ ಪ್ರೌಢಶಾಲಾ ಸಹಯೋಗ ದಲ್ಲಿ ನಡೆದ ಜನಪದ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ರಾಧಾ ಮಾತನಾಡಿ, ಪಠ್ಯದ ಜತೆಗೆ ಸಾಹಿತ್ಯ ಮತ್ತು ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಉತ್ತಮ ಓದಿಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರವಾಡದ ಕಲಾವಿದ ಬಸವಣ್ಣ, ಗೋಪಿ, ಪುರುಷೋತ್ತಮ ಪತ್ತಾರ್ ಬೇಂದ್ರೆ ಅವರ ಭಾವಗೀತೆ, ಶಿಶುನಾಳ ಶರೀಫರ ತತ್ವಪದ ಉತ್ತರ ಕನಾಟಕದ ಗೀಗಿಪದ ಹಾಗೂ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಕಲಾವಿದ ವಸಂತ್ ಸಾಥ್ ನೀಡಿದರು.

ಅಧ್ಯಾಪಕರಾದ ಗುಡದಪ್ಪ, ಕರಿಯಪ್ಪ ಕಂಡ್ರಳ್ಳಿ, ಭಾಸ್ಕರ, ಕವಿತಾ, ರೂಪಾ ಸತೀಶ್, ರಾಜು, ನಾರಾಯಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ್ ಹಾಜರಿದ್ದರು.

- ಎನ್.ಎನ್. ದಿನೇಶ್.