ಮಡಿಕೇರಿ, ಜೂ. 1: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಸಾಂಪ್ರದಾಯಿಕ ಮತ್ತು ಸಮಕಾಲಿನ ಶಿಲ್ಪಕಲೆಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2016ನ್ನು ಪ್ರಸ್ತುತದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕದಲ್ಲಿ ಹುಟ್ಟಿದ ಅಥವಾ ಶಿಲ್ಪಕಲಾ ಪ್ರದರ್ಶನಕ್ಕೆ 5 ವರ್ಷ ಮೊದಲು ರಾಜ್ಯದಲ್ಲಿ ನೆಲೆಸಿರುವ 18 ರಿಂದ 45 ವರ್ಷದ ಒಳಗಿನ ಶಿಲ್ಪಿಗಳು ಪ್ರದರ್ಶನದಲ್ಲಿ ಭಾಗವಹಿಸಬಹುದು. ಪ್ರದರ್ಶನಕ್ಕೆ ಕಳುಹಿಸುವ ಶಿಲ್ಪಗಳು ಗರಿಷ್ಠ ಎರಡು (2) ಅಡಿಗಳ ಪ್ರಮಾಣ ಲೋಹ, ಮರ, ಕಲ್ಲು, ಮಿಶ್ರಮಾಧ್ಯಮದಲ್ಲಿ ಇರಬೇಕು. ಪ್ರದರ್ಶನಕ್ಕೆ ಬರುವ ಶಿಲ್ಪ ಕಲಾಕೃತಿಗಳಲ್ಲಿ 6 ಅತ್ಯುತ್ತಮ ಕಲಾಕೃತಿಗಳಿಗೆ ತಲಾ ರೂ. 25 ಸಾವಿರಗಳ ಬಹುಮಾನ ಕೊಡಲಾಗುವದು. ಶಿಲ್ಪ ಕಲಾಕೃತಿಗಳನ್ನು ವಿವರಣಾ ಪತ್ರದ ಜೊತೆ ತಾ. 30 ರೊಳಗೆ ಅಕಾಡೆಮಿಗೆ ಕಚೇರಿ ವೇಳೆಯಲ್ಲಿ ಖುದ್ದಾಗಿ ತಲುಪಿಸಬೇಕು. ಪ್ರವೇಶ ಶುಲ್ಕ ರೂ.100 ಆಗಿರುತ್ತದೆ. ಶಿಲ್ಪಕೃತಿಗಳ ಪ್ರದರ್ಶನಕ್ಕೆ ಪ್ರವೇಶ ಪಡೆಯಲಿಚ್ಚಿಸುವವರು ವಿವರಣಾ ಪತ್ರವನ್ನು ಕಚೇರಿಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಶಿಲ್ಪಕಲಾ ಅಕಾಡೆಮಿಯಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ರಿಜಿಸ್ಟ್ರಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, 1ನೇ ಮಹಡಿ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002 (ದೂ.ಸಂ: 080-2228725) ಇವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೆಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ ದೂರವಾಣಿ ಸಂಖ್ಯೆ: 08272-228490 ರಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.