ವೀರಾಜಪೇಟೆ, ಜು. 5: ಪೊಲೀಸ್ ಸೇವೆಯನ್ನು ಕರ್ತವ್ಯ ನಿಷ್ಠೆಗನುಗುಣವಾಗಿ ಯಾವದೇ ಭಿನ್ನ-ಬೇಧವಿಲ್ಲದೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವ ವೀರಾಜಪೇಟೆ ವಲಯದ ಡಿ.ವೈ.ಎಸ್.ಪಿ. ಕುಮಾರ್‍ಚಂದ್ರ ಅವರನ್ನು ವೀರಾಜಪೇಟೆ ವಲಯದಲ್ಲಿಯೇ ಮುಂದುವರೆಸುವಂತೆ ವೀರಾಜಪೇಟೆ ತಾಲೂಕು ಜಯ ಕರ್ನಾಟಕ ಸಂಘಟನೆ ಆಗ್ರಹಿಸಿದೆ.

ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡೇಟಿರ ಅನಿಲ್ ಅಯ್ಯಪ್ಪ ಅವರು, ಕುಮಾರ್‍ಚಂದ್ರ ಅವರು ಸಾರ್ವಜನಿಕ ವಲಯದಲ್ಲಿ ಪೊಲೀಸ್ ಸೇವೆಯಲ್ಲಿ ಜನಾನುರಾಗಿಯಾಗಿದ್ದಾರೆ. ಯಾವದೇ ದೂರು ನೀಡಿದರೂ ತಕ್ಷಣ ಸ್ಪಂದಿಸುವ ಮನೋಭಾವವಿದೆ. ಇಂತಹ ಅಧಿಕಾರಿಗಳನ್ನು ಶಾಂತಿಪ್ರಿಯ ನಾಡಾದ ಕೊಡಗಿನಿಂದ ವರ್ಗಾವಣೆ ಮಾಡಿರುವದು ಸರಿಯಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಇವರ ವರ್ಗಾವಣೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದರು.

ಸಂಘಟನೆಯ ನಗರ ಸಮಿತಿ ಉಪಾಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ಕುಮಾರ್‍ಚಂದ್ರ ಅವರು ಎರಡು ವರ್ಷಗಳಿಂದ ವೀರಾಜಪೇಟೆಯಲ್ಲಿ ಉತ್ತಮವಾಗಿ ಪೊಲೀಸ್ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವದೇ ದೂರುಗಳು ಸಮಸ್ಯೆಯಾದಲ್ಲಿ ಅದನ್ನು ನಿಷ್ಪಕ್ಷಪಾತವಾಗಿ ಬಗೆಹರಿಸುತ್ತಾರೆ. ಕೊಡಗಿಗೆ ಇಂತಹ ಅಧಿಕಾರಿಗಳು ಅಗತ್ಯ ಎಂದು ಹೇಳಿದರು.

ತಾಲೂಕು ಸಮಿತಿ ಉಪಾಧ್ಯಕ್ಷ ಕುಂಞÂೀರ ಸುನು ಸುಬ್ಬಯ್ಯ ಮಾತನಾಡಿ, ಕುಮಾರ್ ಚಂದ್ರ ಅವರ ವರ್ಗಾವಣೆ ರದ್ದು ಪಡಿಸಲು ಈಗಾಗಲೇ ಉಸ್ತುವಾರಿ ಸಚಿವ ಹಾಗೂ ಇಲಾಖೆಯ ಐ.ಜಿ. ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘಟನೆಯ ಟಿ. ಸಾಮ್ರಾಟ್, ಮತಾಯಿಸ್, ಮನು ಹಾಗೂ ಹರ್ಷವರ್ಧನ್ ಮತ್ತಿತರರು ಉಪಸ್ಥಿತರಿದ್ದರು.