ಮಡಿಕೇರಿ, ಜು. 20: ಲಿಮ್ರಾ ಅರಫ್ ಫ್ರೆಂಡ್ಸ್ ಆಶ್ರಯದಲ್ಲಿ ಪ್ರಥಮ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕಾಲ್ಚೆಂಡು ಹಾಗೂ ವಾಲಿಬಾಲ್ ಪಂದ್ಯಾಟ ತಾ. 23 ಮತ್ತು 24 ರಂದು ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾಕೂಟದ ಆಯೋಜಕರು ಎರಡು ದಿನಗಳ ಕಾಲ ಕದನೂರಿನ ಅರಮೇರಿಯ ಉದಿಯಂಡ ಡಿ. ಚಂಗಪ್ಪ ಅವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದರು. ತಾ. 23 ರಂದು ಬೆಳಿಗ್ಗೆ 10.30 ಗಂಟೆಗೆ ಉದಿಯಂಡ ಜಮುನಾ ಚಂಗಪ್ಪ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದು, ಲಿಮ್ರಾ ಅರಫದ ಅಧ್ಯಕ್ಷರಾದ ಪಿ.ಎ. ಕರೀಂ ಲಿಮ್ರಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ತಾ. 24 ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಉದಿಯಂಡ ಚಂಗಪ್ಪ ಅವರು ಉದ್ಘಾಟಿಸಲಿದ್ದು, ಕಾಂಗ್ರೆಸ್ ಪಕ್ಷದ ಮಾಜಿ

ಜಿಲ್ಲಾಧ್ಯಕ್ಷ ಬಿದ್ದಾಟಂಡ ಟಿ. ಪ್ರದೀಪ್, ಜಿ.ಪಂ. ಸದಸ್ಯರಾದ ಪಿ.ಎಂ. ಲತೀಫ್, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಕುಪ್ಪೋಡಂಡ ಮಹಮ್ಮದ್ ಹಾರೀಸ್ ಭಾಗವಹಿಸಲಿ ದ್ದಾರೆ ಎಂದು ಲಿಮ್ರಾ ಅರಫದ ಕಾರ್ಯದರ್ಶಿ ಸಿ.ಎ. ರಹಮಾನ್ ತಿಳಿಸಿದರು.

ಸರಣಿ ಶ್ರೇಷ್ಠ, ಉತ್ತಮ ಗೋಲ್ ಕೀಪರ್ ಹಾಗೂ ಫೈನಲ್ ಪಂದ್ಯದಲ್ಲಿ ವ್ಯಕ್ತಿಗತ ಪ್ರಶಸ್ತಿಯನ್ನು ನೀಡಲಾಗುವದು ಎಂದರು. ಕಾಲ್ಚೆಂಡಿನಲ್ಲಿ ಪ್ರಥಮ ಬಹುಮಾನ ರೂ. 11,313, ದ್ವಿತೀಯ ಬಹುಮಾನ ರೂ. 7,313, ವಾಲಿಬಾಲ್‍ನಲ್ಲಿ ಪ್ರಥಮ ಬಹುಮಾನ ರೂ. 5,313 ಹಾಗೂ ದ್ವಿತೀಯ ಬಹುಮಾನ ರೂ. 3,313 ನ್ನು ನೀಡಲಾಗುವದೆಂದು ಮಾಹಿತಿ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

94499 89018, 9482443130,

94482 70786.