ಕುಶಾಲನಗರ, ಜ. 1: ಪ್ರತಿಯೊಬ್ಬರೂ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಪರಸ್ಪರ ಸಹಕಾರಿ ಮನೋಭಾವನೆ ಯೊಂದಿಗೆ ಜೀವನ ಸಾಗಿಸುವಂತಾ ಗಬೇಕೆಂದು ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಎಂ. ಅರುಣ್ ಶೆಟ್ಟಿ ಕರೆ ನೀಡಿದ್ದಾರೆ.ಕುಶಾಲನಗರದ ಗೌಡ ಸಮಾಜದಲ್ಲಿ ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರ ಕ್ಲಬ್‍ಗಳು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಧಿಕೃತ ಭೇಟಿ ನೀಡಿ ನಂತರ ಅವರು ಮಾತನಾಡಿದರು. ವಿಶ್ವದಲ್ಲಿ 211 ದೇಶಗಳಲ್ಲಿ ಒಟ್ಟು 1.45 ಮಿಲಿಯನ್ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುವ ಲಯನ್ಸ್ ಸಂಸ್ಥೆ ಸೇವಾ ಮನೋಭಾವನೆಯೊಂದಿಗೆ ಹಲವು ಗುರಿಗಳನ್ನು ಸಾಧಿಸಿದೆ ಎಂದರು.

ಕುಶಾಲನಗರ ಲಯನ್ಸ್ ಅಧ್ಯಕ್ಷ ಎಂ.ವಿ. ಶಶಿಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭದಲ್ಲಿ ಕ್ಲಬ್ ಕಾರ್ಯದರ್ಶಿಗಳಾದ ಡಾ. ಪ್ರವೀಣ್ ದೇವರಗುಂಡ, ಫಾ. ಇಗ್ನೇಶಿಯಸ್ ಮೆಸ್ಕರೇನಿಯಸ್, ಮಂಜುನಾಥ್ ಚೌಟ ಅವರುಗಳು ವಾರ್ಷಿಕ ವರದಿ ವಾಚಿಸಿದರು.

ಈ ಸಂದರ್ಭ ನೂತನ ಸದಸ್ಯರುಗಳಾಗಿ ಚಿಲ್ಲನ ಗಣಿಪ್ರಸಾದ್, ಉದಯ್ ತಿಮ್ಮಯ್ಯ, ಹರ್ಷ, ರೋಹಿತ್ ಅವರುಗಳನ್ನು ಸೇರ್ಪಡೆಗೊಳಿಸಲಾಯಿತು.

ಮಡಿಕೇರಿ ಮತ್ತು ಸೋಮವಾರಪೇಟೆ ಲಯನ್ಸ್ ಅಧ್ಯಕ್ಷರುಗಳಾದ ಅಗಸ್ಟಿನ್ ಜಯರಾಜ್, ಎ.ಎಸ್. ಮಹೇಶ್, ಕವಿತಾ ಬೊಳ್ಳಪ್ಪ, ವಲಯ ಪ್ರಮುಖರಾದ ದಿಲಾರಾಂ, ಇಂದಿರಾ ಅರುಣ್ ಶೆಟ್ಟಿ, ಪೊನ್ನಚ್ಚನ ಎಂ. ಮೋಹನ್, ಮೋಹನ್ ದಾಸ್, ನಿರಂಜನ್ ಮತ್ತಿತರರು ಇದ್ದರು.