ಮಡಿಕೇರಿ, ಜು. 27: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ತಾ. 31 ರಂದು ಏರ್ಪಡಿಸಲಾಗಿರುವ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯಲ್ಲಿ 29 ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10.30 ಗಂಟೆಗೆ ಪತ್ರಿಕಾಭವನದಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಘದ ಮಾಜಿ ಅಧ್ಯಕ್ಷ, ‘ಶಕ್ತಿ’ ಸಂಪಾದಕ ಬಿ.ಜಿ. ಅನಂತಶಯನ ಉದ್ಘಾಟಿಸಿ, ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಮೂಡಾ ಅಧ್ಯಕ್ಷೆ ಸುರಯ್ಯಾ ಅಬ್ರಾರ್ ಪಾಲ್ಗೊಳ್ಳಲಿದ್ದಾರೆ.

ಸನ್ಮಾನಿತರು: ದಿಟ್ಟ ಪತ್ರಕರ್ತ ಪುರಸ್ಕಾರಕ್ಕೆ ಭಾಜನರಾಗಿರುವ ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಸಾಪ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್. ಲೋಕೇಶ್‍ಸಾಗರ್ (ವಿಜಯಕರ್ನಾಟಕ), ಮಡಿಕೇರಿ ತಾಲೂಕು ಅಧ್ಯಕ್ಷರಾಗಿರುವ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಕುಡೆಕಲ್ ಸಂತೋಷ್ (ಶಕ್ತಿ), ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿರುವ ಮುಲ್ಲೇಂಗಡ ಮಧೋಶ್ ಪೂವಯ್ಯ (ತೂಕ್‍ಬೊಳಕ್), ಶ್ರೀಮಂಗಲ ಹೋಬಳಿ ಅಧ್ಯಕ್ಷರಾಗಿರುವ ಚಟ್ಟಂಡ ರವಿ ಸುಬ್ಬಯ್ಯ (ವಿಜಯಕರ್ನಾಟಕ), ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿರುವ ಬಿ.ಜಿ. ಅನಂತಶಯನ (ಶಕ್ತಿ), ಮಡಿಕೇರಿ ತಾಲೂಕು ಅಧ್ಯಕ್ಷರಾಗಿರುವ ಎಚ್.ಟಿ. ಅನಿಲ್ (ವಿಶ್ವವಾಣಿ), ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ (ಶಕ್ತಿ), ವೀರಾಜಪೇಟೆ ತಾಲೂಕು ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ (ಪೂಮಾಲೆ), ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಅಣ್ಣೀರ ಹರೀಶ್ ಮಾದಪ್ಪ (ಶಕ್ತಿ), ವೀರಾಜಪೇಟೆ ತಾ.ಪಂ. ಸದಸ್ಯರಾಗಿರುವ ಕುಟ್ಟಂಡ ಅಜಿತ್ ಕರುಂಬಯ್ಯ (ಶಕ್ತಿ) ಅವರುಗಳನ್ನು ಸನ್ಮಾನಿಸಲಾಗುತ್ತದೆ.

ಜಿಲ್ಲೆಯ ಮೂವರು ಪತ್ರಿಕಾ ವಿತರಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತಿದ್ದು, ಟಿ.ಜಿ. ಸತೀಶ್ (ಮಡಿಕೇರಿ), ನಾಗೇಶ್ (ಗೋಪಾಲಪುರ), ನಾರಾಯಣ (ತಿತಿಮತಿ) ಅವರನ್ನು ಸನ್ಮಾನಿಸಲಾಗುತ್ತದೆ.

ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಕೂಡ ಸನ್ಮಾನಿಸಲಾಗುತ್ತಿದೆ. 7ನೇ ತರಗತಿಯಲ್ಲಿ ಅಂಕ ಪಡೆದ ಪಳೆಯಂಡ ಪಾರ್ಥ ಚಿಣ್ಣಪ್ಪ ಅವರ ಪುತ್ರಿ ಪಿ.ಸಿ. ಕೋಯಲ್, ಕುಡೆಕಲ್ ಸಂತೋಷ್ ಅವರ ಪುತ್ರಿ ಕೆ.ಎಸ್. ಸುರಕ್ಷಾ, ಅಂಚೆಮನೆ ಸುಧಿ ಅವರ ಪುತ್ರಿ ಎ.ಎಸ್. ಕೃತಿಕಾ, ಸಣ್ಣುವಂಡ ಎಂ. ಚಂಗಪ್ಪ ಅವರ ಪುತ್ರ ಯತೀಕ್ ಅಯ್ಯಪ್ಪ, 9ನೇ ತರಗತಿಯಲ್ಲಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಪುತ್ರ ಎ.ಪಿ. ಬೋಪಣ್ಣ, ಕಿರಿಯಮಾಡ ರಾಜ್ ಕುಶಾಲಪ್ಪ ಅವರ ಪುತ್ರಿ ಕೆ.ಕೆ. ಕೀರ್ತನಾ, ಹತ್ತನೇ ತರಗತಿಯಲ್ಲಿ ಎಸ್. ಗಣೇಶ್ ಕುಮಾರ್ ಅವರ ಪುತ್ರಿ ಎಸ್.ಜಿ. ಚಲನಾಂಬಿಕಾ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರ ಪುತ್ರ ಡಾನ್ ನಾಚಯ್ಯ, ಅರುಣ್ ಕೂರ್ಗ್ ಅವರ ಪುತ್ರಿ ಕೆ.ಎ. ಗ್ರೀಷ್ಮಾ, ಪ್ರಥಮ ಪಿಯುಸಿಯಲ್ಲಿ ಎಚ್.ಟಿ. ಅನಿಲ್ ಅವರ ಪುತ್ರ ನಿಹಾರ್, ದ್ವಿತೀಯ ಪಿಯುಸಿಯಲ್ಲಿ ಎಸ್. ಮಹೇಶ್ ಅವರ ಪುತ್ರ ಎಸ್.ಎಂ. ಧನುಷ್, ಸಣ್ಣುವಂಡ ಎಂ. ಚಂಗಪ್ಪ ಅವರ ಪುತ್ರಿ ಆಶಿಕಾ ಮುತ್ತಮ್ಮ, ಪ್ರಥಮ ವರ್ಷದ ಇಂಜಿನಿಯರಿಂಗ್‍ನಲ್ಲಿ ಸವಿತಾ ರೈ ಅವರ ಪುತ್ರಿ ಎಂ.ಜಿ. ಪ್ರಾರ್ಥನಾ, ಸಣ್ಣುವಂಡ ಎಂ. ಚಂಗಪ್ಪ ಅವರ ಪುತ್ರಿ ಅಂಶಿಕಾ ಗೌರಮ್ಮ, ಎಸ್.ಟಿ. ವಿಜೇತ ಅವರ ಪುತ್ರಿ ಎಸ್.ವಿ. ಧನ್ಯತಾ ಅವರನ್ನು ಸನ್ಮಾನಿಸಲಾಗುತ್ತದೆ.

ಸನ್ಮಾನಿತರು ಖುದ್ದಾಗಿ ತಾ. 31ರಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಪಡೆದುಕೊಳ್ಳಬೇಕಾಗಿದೆ. ಅವರ ಪರವಾಗಿ ಪೋಷಕರು, ಇನ್ನಿತರರು ಆಗಮಿಸಿದ್ದಲ್ಲಿ ಅವರುಗಳಿಗೆ ನೀಡಲಾಗುವದಿಲ್ಲ ಎಂದು ಕಾರ್ಯದರ್ಶಿ ಸಂತೋಷ್ ತಿಳಿಸಿದ್ದಾರೆ.