ಗೋಣಿಕೊಪ್ಪಲು, ನ. 17: ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್, ಬಾಳೆಲೆ, ಮಾಯಮುಡಿ, ನಲ್ಲೂರು ಸಹಕಾರ ಸಂಘಗಳು ವೀರಾಜಪೇಟೆ ತಾಲೂಕು ಗಿರಿಜನರ ವಿವಿದೋದ್ದೆಶ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾ. 19 ರಂದು (ನಾಳೆ) ಪೂರ್ವಾಹ್ನ 11 ಗಂಟೆಗೆ ತಿತಿಮತಿ ಸಹಕಾರ ಸಂಘದ ಸಭಾಂಗಣದಲ್ಲಿ 63 ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಯನ್ನು ಹಮ್ಮಿಕೊಂಡಿರುವದಾಗಿ ತಿತಿಮತಿ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಕೊಡಂದೇರ ಪಿ. ಗಣಪತಿ ಸಹಕಾರಿ ಧ್ವಜಾರೋಹಣ, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.

ದಿನದ ಮಹತ್ವ ಕುರಿತು ಮಡಿಕೇರಿಯ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್‍ನ ಪ್ರಾಂಶುಪಾಲೆ ಆರ್.ಎಸ್. ರೇಣುಕ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ, ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಪುಗ್ಗೇರ ಜಿ. ನಂಜುಂಡ, ದೇಯಂಡ ಪಿ. ಬೋಪಣ್ಣ, ಉದ್ದಪಂಡ ಎಸ್. ಜಗತ್, ಕಂಜಿತಂಡ ಕೆ. ಮಂದಣ್ಣ, ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ, ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ಅಪ್ಪಯ್ಯ, ನಲ್ಲೂರು ಸಹಕಾರ ಸಂಘದ ಅಧ್ಯಕ್ಷ ಮಲ್ಚೀರ ಎನ್. ಬೋಪಣ್ಣ, ತಿತಿಮತಿ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಜೆ.ಕೆ. ರಾಮು, ಕೊಡಗು ಸಹಕಾರ ಸಂಘಗಳ ನಿಬಂಧಕ ಎಸ್.ಡಿ. ರವಿಕುಮಾರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.