ಮಡಿಕೇರಿ, ಡಿ. 21: ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಬಾಲಕಿಯರ ಥ್ರೋಬಾಲ್ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಮದೆ ಮಹೇಶ್ವರ ಪ್ರೌಢಶಾಲೆಯ ತಂಡವು ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.
ಬೆಳಗಾಂ, ಬೆಂಗಳೂರು ಹಾಗೂ ಗುಲ್ಬರ್ಗಾ ವಿಭಾಗವನ್ನು ಮಣಿಸಿದ ಈ ತಂಡವು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದೆ. 2017ರ ಜನವರಿ 2 ರಿಂದ 9ರವರೆಗೆ ದೆಹಲಿಯಲ್ಲಿ ಸ್ಪರ್ಧೆ ನಡೆಯಲಿದೆ. ಕೆ.ಜೆ. ನಿಸ್ಮಿತ (ನಾಯಕಿ), ಹೆಚ್.ಎಸ್. ರಕ್ಷಿತ, ವಿ.ಬಿ. ಯಶ್ವಿತ, ವಿ.ಬಿ. ಯಶ್ವಿನಿ, ಎಂ.ಕೆ. ಪದ್ಮ, ಸಿ.ಆರ್. ರಾಧಿಕ, ಕೆ.ಸಿ. ಮೋನಿಕ ಹಾಗೂ ಬಿ.ಎಸ್. ಅನುಶ್ರೀ ಇವರು ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ತಂಡದಲ್ಲಿದ್ದರು.
ದೈಹಿಕ ಶಿಕ್ಷಕ ಪಿ.ಪಿ. ಜಯರಾಮ ತಂಡವನ್ನು ಸಜ್ಜುಗೊಳಿಸಿದ್ದರು. ಸಹಾಯಕರಾಗಿ ಗಣಿತ ಶಿಕ್ಷಕ ಎಂ.ಎಸ್. ಶಿವರಾವ್ ಜೊತೆಗಿದ್ದು, ವಿಜ್ಞಾನ ಶಿಕ್ಷಕಿ ಕೆ.ಎಸ್. ದಮಯಂತಿ ತಂಡದ ವ್ಯವಸ್ಥಾಪಕಿಯಾಗಿದ್ದರೆಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.