ಮಡಿಕೇರಿ, ಆ. 24: ನಗರ ಪ್ರದೇಶದಲ್ಲಿ ಹರಿಯುವ ತೋಡು, ಚರಂಡಿ, ಕಾಲುವೆಗಳು ಒತ್ತುವರಿ ಯಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕೆಂಬ ಆಗ್ರಹ ನಗರಸಭಾ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿತು.ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಹಿರಿಯ ಸದಸ್ಯ ಚುಮ್ಮಿದೇವಯ್ಯ ಅವರು, ನಗರದಲ್ಲಿ ಮನೆ - ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡುವ ಸಂದರ್ಭ ಹೆಚ್ಚಿನ ಗಮನ ಹರಿಸಬೇಕಾಗಿದೆ. ಬಹುತೇಕ ತೋಡು, ಚರಂಡಿಗಳ ಒತ್ತುವರಿಯಾ ಗುತ್ತಿದ್ದು, ನೀರು ಹರಿಯಲು ಜಾಗವಿಲ್ಲದೆ, ರಸ್ತೆ, ವಸತಿ ಪ್ರದೇಶಗಳತ್ತ ಹರಿಯುತ್ತಿದೆ. ಇದರಿಂದ

ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು. ಕಾರ್ಯ ಕ್ರಮಕ್ಕೂ ಮುನ್ನ ಹಿರಿಯ ನಾಗರಿಕ ವಿ.ಎನ್.ವಸಂತಕುಮಾರ್ ಮತ್ತು ಬಳಗದ ಸದಸ್ಯರ ಮೂಲಕ ಕುಶಾಲನಗರ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಪ್ರಮುಖರಾದ ಕೆ.ಎಸ್. ರಾಜಶೇಖರ್, ಎನ್.ಕೆ.ಮೋಹನ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು, ಪ್ರಮುಖರಾದ ಎಂ.ವಿ. ನಾರಾಯಣ, ನಿಡ್ಯಮಲೆ ದಿನೇಶ್, ಎಂ.ಡಿ.ಕೃಷ್ಣಪ್ಪ, ಭಾಸ್ಕರ್ ನಾಯಕ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಹೆಚ್.ಪಿ. ಶಿವಕುಮಾರ್, ಕೆ.ಬಿ.ರಾಜು, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಕರವೇ ನಗರಾಧ್ಯಕ್ಷ ಬಿ.ಜೆ. ಅಣ್ಣಯ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಚಂದ್ರಶೇಖರ್, ಬಳಗದ ಸದಸ್ಯರಾದ ಡಿ.ಆರ್. ಸೋಮಶೇಖರ್, ಎ.ಪಿ. ಗಣಪತಿ, ವನಿತಾ ಚಂದ್ರಮೋಹನ್, ವಿನೋದ್, ಲತೀಶ್, ನೀಲಾ ಟಿ.ಎಲ್.ಶ್ರೀನಿವಾಸ್, ರಾಜುರೈ ಮತ್ತಿತರರು ಇದ್ದರು. ಕಾವೇರಿ ಸುದ್ದಿ ಸೆಂಟರ್ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಗದ ಸದಸ್ಯರಾದ ಕೆ.ಎಸ್.ಮೂರ್ತಿ ಸ್ವಾಗತಿಸಿದರು, ಕುಡೆಕಲ್ ಗಣೇಶ್ ಪ್ರಾರ್ಥಿಸಿದರು, ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.ಗೌರಿ ಕೆರೆಗೆ ಮರ ಬಿದ್ದು, ಅಡಚಣೆಯಾಗಿದೆ. ಆದಷ್ಟು ಶೀಘ್ರ ಕೆರೆಯನ್ನು ಸ್ವಚ್ಛಗೊಳಿಸಿ ಮರವನ್ನು ತೆರವುಗೊಳಿಸುವಂತೆ ಸದಸ್ಯ ಪ್ರಕಾಶ್ ಆಚಾರ್ಯ ಒತ್ತಾಯಿಸಿದರು. ಈ ಬಗ್ಗೆ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿರುವದಾಗಿ ಆಯುಕ್ತರು ಉತ್ತರಿಸಿದರು. ಪ್ರತಿಕ್ರಿಯಿಸಿದ ಆರೋಗ್ಯ ನಿರೀಕ್ಷಕ ರಾಜಶೇಖರ್ ಇನ್ನೆರಡು ದಿನಗಳಲ್ಲಿ ತೆರವುಗೊಳಿಸು ವದಾಗಿ ಹೇಳಿದರು. ಈ ಸಂದರ್ಭ ಮಾತನಾಡಿದ ಸದಸ್ಯ ರಮೇಶ್ ಸನಿಹದಲ್ಲೇ ಬೀಳುವ ಸ್ಥಿತಿಯಲ್ಲಿ ಮರವಿದ್ದರೆ ಅದನ್ನು ಕೂಡ ತೆರವು ಗೊಳಿಸಿ, ಗಣೇಶ ವಿಸರ್ಜನೆ ಸಂದರ್ಭ ಅನಾಹುತವಾಗುವದು ವೀಣಾಕ್ಷಿ ಪ್ರಶ್ನಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಆಯುಕ್ತರು ಅಜೆಂಡಾದಲ್ಲಿರುವ ಕಾಮಗಾರಿಗಳಿಗೆ ಅನುಮೋದನೆ ಪಡೆದು ಟೆಂಡರ್ ಕರೆದು ವರ್ಕ್ ಅರ್ಡರ್ ನೀಡಿದ ಬಳಿಕವಷ್ಟೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ವರ್ಕ್ ಅರ್ಡರ್ ನೀಡಿದರೂ ಯಾವದೇ ಕೆಲಸಗಳಾಗುತ್ತಿಲ್ಲವೆಂದು ಅಸಮಾ ಧಾನ ವ್ಯಕ್ತಪಡಿಸಿದರು.

ಸಜಿತ್ ಕತೆ ಏನಾಯ್ತು ?

ತೆರಿಗೆ ಹಾಗೂ ಬಾಡಿಗೆ ವಸೂಲಾತಿಯಲ್ಲಿ ಸಜಿತ್‍ಕುಮಾರ್ ಲಕ್ಷಾಂತರ ರೂಪಾಯಿ ಅವ್ಯವಹಾರ ವೆಸಗಿದ್ದು, ಈ ಬಗ್ಗೆ ನಡೆದ ತನಿಖೆಯ ಬಗ್ಗೆ ಯಾವದೇ ಮಾಹಿತಿ ಇಲ್ಲ. ಈ ಸಂದರ್ಭ 28 ಮಂದಿಗೆ ನೋಟೀಸ್ ಬಂದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಏನಾದರೂ ಮಾತುಕತೆ ಆಗಿದೆಯೇ, ಮಾಹಿತಿ ಇದ್ದರೆ ನೀಡಿ ಎಂದು ಸದಸ್ಯ ಅಮೀನ್ ಮೊಹಿಸಿನ್ ಆಗ್ರಹಿಸಿದರು. ಧನಿಗೂಡಿಸಿದ ಟಿ.ಎಸ್. ಪ್ರಕಾಶ್ ಈ ಬಗ್ಗೆ ವಿಚಾರಿಸುತ್ತಾ ಪ್ರತಿದಿನ ವಂಚನೆಕ್ಕೊಳಗಾದ ಜನರು ಬರುತ್ತಿದ್ದಾರೆ. ಮಾಹಿತಿ ನೀಡಿ ಎಂದರು. ಪ್ರತಿಕ್ರಿಯಿಸಿದ ಆಯುಕ್ತೆ ಪುಷ್ಪಾವತಿ ಅವರು, ಪ್ರಕರಣ ತನಿಖೆಯಲ್ಲಿರುವದರಿಂದ ಯಾವದೇ ಮಾಹಿತಿ ಇಲ್ಲ. ತಮಗೂ, ಲೆಕ್ಕಾಧಿಕಾರಿ ಸೇರಿದಂತೆ ಕಂದಾಯ ಅಧಿಕಾರಿಗಳಿಗೆ ಮಾಹಿತಿ ಬಯಸಿ ನೋಟೀಸ್ ಬಂದಿದ್ದು, ನಾವುಗಳು ಮಾಹಿತಿ ನೀಡಿರುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾತ ನಾಡಿದ ಕೆ.ಎಸ್. ರಮೇಶ್, ಈ ಪ್ರಕರಣದಲ್ಲಿ ಸಜಿತ್‍ಕುಮಾರ್ ಕ್ಲೀನ್‍ಚಿಟ್ ಪಡೆದುಕೊಳ್ಳುವದು ಖಚಿತ. ಕಾನೂನು ಪ್ರಕಾರ ಹೋದರೆ ನಗರಸಭೆಯದ್ದೇ ತಪ್ಪಾಗುತ್ತದೆ. ಆತನನ್ನು ನಂಬಿ ಹಣ ನೀಡಿದವರು ಮೋಸಕ್ಕೊಳಗಾಗುತ್ತಾರೆ. ಆತನಿಗೆ ಎಲ್ಲಾ ಜವಾಬ್ದಾರಿ ನೀಡಿದ್ದು ತಪ್ಪು ಎಂದು ಹೇಳಿದರು.