ವೀರಾಜಪೇಟೆ, ಜು. 27: ಅಮ್ಮತ್ತಿ ಒಂಟಿಯಂಗಡಿಯ ಕಣ್ಣಂಗಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಎರವರ ಎಸ್. ಈಶ್ವರಿ ಎಂಬಾಕೆಗೆ ಪಂಚಾಯಿತಿ ಸಭೆಗೆ ಹಾಜರಾಗಲು ಬಿಡದೆ ದಿಗ್ಬಂಧನ ವಿಧಿಸಿದ ಆರೋಪದ ಮೇರೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಅದೇ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್. ಗೋಪಾಲಕೃಷ್ಣ ಎಂಬವರ ಮೇಲೆ ಐ.ಪಿ.ಸಿ 506, 3 (1) (10) (11) ಎಸ್ಸಿ &amdiv; ಎಸ್.ಟಿ ಆಕ್ಟ್ 1989ನಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.2015ರ ಜುಲೈ ತಿಂಗಳಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಈಶ್ವರಿ ನಂತರ ಕೆಲವೇ ದಿನಗಳಲ್ಲಿ ಮೀಸಲಾತಿಯ ಆಧಾರದ ಮೇಲೆ ಅಧ್ಯಕ್ಷೆಯಾಗಿ ಆಯ್ಕೆಯಾದರು. ಗೋಪಾಲಕೃಷ್ಣ ಅವರ ತೋಟದ ಹಂದಿಗೂಡಿನಲ್ಲಿ ಕೆಲಸ ಮಾಡಿಕೊಂಡಿದ್ದ ಈಶ್ವರಿಗೆ ಮೀಟಿಂಗ್ ನೋಟೀಸ್ ಬಂದರೂ ಮೀಟಿಂಗ್ ಆರಂಭವಾಗಲು ಕೆಲವೇ ನಿಮಿಷಗಳಿರುವಾಗ ಭದ್ರತೆಯಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿ ಮೀಟಿಂಗ್ ಮುಗಿದ ತಕ್ಷಣ ಯಾರೊಂದಿಗೂ ಸಂಪರ್ಕಿಸಲು ಬಿಡದೆ ಮತ್ತೆ ತೋಟದ ಕಾರ್ಮಿಕರ ಲೈನು ಮನೆಗೆ ಬಿಡುತ್ತಿದ್ದರು. ಗೌರವ ವೇತನ ರೂ. 1000 ಹಾಗೂ ದಿನದ ಭತ್ಯೆಯ ಚೆಕ್ ಅನ್ನು ಆಕೆಯಲ್ಲಿ ಸಹಿ ಮಾಡಿಸಿ ಒಂದು ವರ್ಷದಿಂದ ಗೋಪಾಲಕೃಷ್ಣನೇ ದುರುಪಯೋಗ ಪಡಿಸಿಕೊಂಡಿರುವದಾಗಿ ಈಶ್ವರಿ ದೂರಿದ್ದಾರೆ.
ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ಈಶ್ವರಿ ದಿನನಿತ್ಯ ಹೋಗಲು ಬಿಡುತ್ತಿರಲಿಲ್ಲ. ಈಶ್ವರಿ ಏನಾದರೂ ಪಂಚಾಯಿತಿ ಬಗ್ಗೆ ಕೇಳಿದರೆ ಗ್ರಾಮ ಪಂಚಾಯಿತಿ ನಿನಗೆ ಸಂಬಂಧವಿಲ್ಲ ಗ್ರಾಮ ಪಂಚಾಯಿತಿಗೆ ನಾನೇ ಅಧ್ಯಕ್ಷ, ಎಲ್ಲ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತೇನೆ
ಎಂದು ಗದರಿಸುತ್ತಿದ್ದ. ಪಂಚಾಯಿತಿಯ ದೈನಂದಿನ ವ್ಯವಹಾರದ ಚೆಕ್ಗಳಿಗೆ ಇತರ ಅಗತ್ಯ ದಾಖಲೆ ಪತ್ರಗಳಿಗೆ ಸಹಿ ಹಾಕಿಸುತ್ತಿದ್ದ. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ಮಾಡದಂತೆ ಷರತ್ತು ವಿಧಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಜೂನ್ 24ರಂದು ಕಿರುಕುಳ ತಡೆಂiÀiಲಾಗದೆ ಈಶ್ವರಿ ಕುಟುಂಬ ಸಿದ್ದಾಪುರದ ಕರಡಿಗೋಡು ಬಳಿಯ ಬರಡಿ ಎಂಬ ಸ್ಥಳದಲ್ಲಿರುವ ಅತ್ತೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಪ್ರತಿದಿನ ಕಣ್ಣಂಗಾಲ ಪಂಚಾಯಿತಿಗೆ ಹಾಜರಾಗಿ ಒಂದು ತಿಂಗಳಿಂದ ದೈನಂದಿನ ಚಟುವಟಿಕೆಗಳ ಬಗ್ಗೆ ಗಮನಿಸುತ್ತಿರುವದಾಗಿ ಈಶ್ವರಿ ಪೊಲೀಸರಿಗೆ ತಿಳಿಸಿದ್ದಾರೆ.
ಗೋಪಾಲಕೃಷ್ಣ ದಿಗ್ಬಂಧನ ವಿಧಿಸಿರುವ ಕುರಿತು ಈಶ್ವರಿ ಯಾರಿಗಾದರೂ ತಿಳಿಸಿದರೆ, ದೂರು ನೀಡಿರುವದು ಗೊತ್ತಾದರೆ ಜೀವಕ್ಕೆÀ ಆಪತ್ತು ಎಂದು ಬೆದರಿಕೆ ಹಾಕಲಾಗಿದೆ. ಈಶ್ವರಿಗೆ, ಗಂಡ, ಎರಡು ಗಂಡು ಮಕ್ಕಳಿದ್ದು ಮಕ್ಕಳನ್ನು ಶಾಲೆಗೆ ಸೇರಿಸಲು ಬಿಟ್ಟಿಲ್ಲ. ಹಂದಿಗೂಡು ಹಾಗೂ ತೋಟದಲ್ಲಿ ಕೂಲಿ ಕೆಲಸ ಮಾಡಿದರೆ ಆತ ದಿನಕ್ಕೆ ರೂ. 125ರಂತೆ ಕೂಲಿ ಕೊಡುತ್ತಿದ್ದ ಎಂದು ಈಶ್ವರಿಯ ಪತಿ ಸಂತೋಷ್ ತಿಳಿಸಿದ್ದಾರೆÉ.
ಈಶ್ವರಿ ಮನೆಯಿಂದ ತಪ್ಪಿಸಿಕೊಳ್ಳುವ ಸಮಯದಲ್ಲಿ ಈಶ್ವರಿ ಕುಟುಂಬಕ್ಕೆ ಸೇರಿದ ಎಲ್ಲ ದಾಖಲೆಗಳು ಪಂಚಾಯಿತಿಗೆ ಚುನಾಯಿತರಾದ ದೃಢೀಕರಣ ಪತ್ರ ಗೋಪಾಲಕೃಷ್ಣನ ಬಳಿ ಇದೆ. ಅದನ್ನು ಕೊಡಿಸುವಂತೆ ಪೊಲೀಸರಿಗೆ ದೂರಿನಲ್ಲಿ ಕೋರÀಲಾಗಿದೆ.
ಮಾಧ್ಯಮದವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ ಅವರನ್ನು ಸಂಪರ್ಕಿಸಿದಾಗ ಈಶ್ವರಿ ಕಳೆದ ಒಂದು ತಿಂಗಳಿಂದ ದೈನಂದಿನ ಚಟುವಟಿಕೆ ಬಗ್ಗೆ ಗಮನ ಹರಿಸಲು ಹಾಜರಾಗುತ್ತಿದ್ದಾರೆ ಎಂದು ತಿಳಿಸಿದರು. ಪೂಣಚ್ಚ ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ಅವರ ಮುಂದೆ ಹಾಜರಾಗಿ ಹೇಳಿಕೆ ನೀಡಿರುವದಾಗಿ ತಿಳಿದು ಬಂದಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ವೆಚ್ಚಕ್ಕಾಗಿ ತನಗೆ ಬರಬೇಕಿದ್ದ ರೂ. 40,000 ನಗದು ಹಣವನ್ನು ಗೋಪಾಲಕೃಷ್ಣ ಗುಳುಂ ಮಾಡಿರುವದಾಗಿ ಈಶ್ವರಿ ತನ್ನ ಅಳಲನ್ನು ಮಾಧ್ಯಮದವರ ಮುಂದೆ ತೋಡಿಕೊಂಡರು.