ಗೋಣಿಕೊಪ್ಪಲು, ಡಿ.1: ಇದೇ ಪ್ರಥಮ ಬಾರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಗೋಣಿಕೊಪ್ಪಲು ಜನನಿ ಪೆÇಮ್ಮಕ್ಕಡ ಕೂಟ ಹಾಗೂ ಇಲ್ಲಿನ ಕಾವೇರಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪೆÇಮ್ಮಕ್ಕಡ ನಮ್ಮೆಯನ್ನು ಗೋಣಿಕೊಪ್ಪಲಿನಲ್ಲಿ ತಾ.11 ರಂದು ಹಮ್ಮಿಕೊಂಡಿರುವದಾಗಿ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ತಿಳಿಸಿದ್ದಾರೆ.ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ಮಹಿಳಾ ದಸರಾ ಯಶಸ್ಸನ್ನು ಮನಗಂಡು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗಾಗಿ ಮುಕ್ತ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿರು ವದಾಗಿ ಅವರು ಇಲ್ಲಿನ ಪ್ರೆಸ್‍ಕ್ಲಬ್‍ನಲ್ಲಿ ಮಾಹಿತಿ ನೀಡಿದರು.
ಉಮ್ಮತ್ತಾಟ್, ವಾಲಗತ್ತಾಟ್, ಕೊಡವ ಕಿರು ನಾಟಕ ನೃತ್ಯ, ಪಾಟ್ ಪೈಪೆÇೀಟಿ, ಒಂಟಿ ನಟನೆ, ಕೊಡವ ಗಾದೆ ಮತ್ತು ವಿವರಣೆ, ಕೊಡವ ಉಡುಪು ಪೈಪೆÇೀಟಿ, ಹೂವು ಪ್ರದರ್ಶನ ಮತ್ತು ಮಾರಾಟ, ಜಾನಪದ ಪಳಯುಳಿಕೆ ಪ್ರದರ್ಶನ, ತಿಂಡಿ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ ಹಾಗೂ ಅಡುಗೆ ಸ್ಪರ್ಧೆ ಪ್ರದರ್ಶನ ಮತ್ತು ಮಾರಾಟ ವಿಭಾಗದಲ್ಲಿ ಸ್ಪರ್ಧಾ ಕಾರ್ಯ ಕ್ರಮವಿದ್ದು, 5 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸುವ ಸಾಧ್ಯತೆ ಇರುವದಾಗಿ ತಿಳಿಸಿದ್ದಾರೆ. ಕೊಡಗು ಜಿಲ್ಲೆಯಲ್ಲದೆ ಬೆಂಗಳೂರು-ಮೈಸೂರು ಕೊಡವ ಸಮಾಜದ ಮಹಿಳೆಯರೂ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು ಸುಮಾರು ರೂ.5 ಲಕ್ಷಕ್ಕೂ ಅಧಿಕ ವೆಚ್ಚ ತಗುಲಲಿದೆ ಎಂದು ಬಿ.ಎಸ್.ತಮ್ಮಯ್ಯ ತಿಳಿಸಿದ್ದಾರೆ.ಪೆÇಮ್ಮಕ್ಕಡ ನಮ್ಮೆಯಲ್ಲಿ ಕೊಡವ ಮತ್ತು ಕೊಡವ ಭಾಷಿಕ ಮಹಿಳೆಯರಿಗೆ ಭಾಗವಹಿಸಲು ಅವಕಾಶವಿದ್ದು, ವಿವಿಧ ಸ್ಪರ್ಧೆಗಳು
ಕಾವೇರಿ ಕಾಲೇಜಿನ ವಿವಿಧೆಡೆ ಏಕಕಾಲದಲ್ಲಿ ನಡೆಯಲಿದೆ. ಆಟ್-ಪಾಟ್ ಪೈಪೆÇೀಟಿ ಪರಿಕರವನ್ನು ಸ್ಪರ್ಧಾಳುಗಳೇ ತರತಕ್ಕದ್ದು. ಪೈಪೆÇೀಟಿಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಭಾಗವಹಿಸ ಬೇಕೆಂದು ಹೇಳಿದರು.
ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ 60 ಮಹಿಳೆಯರ ಸಮ್ಮುಖದಲ್ಲಿ ಚರ್ಚೆ ನಡೆದು ಪೆÇಮ್ಮಕ್ಕಡ ನಮ್ಮೆ ಕಾರ್ಯಕ್ರಮವನ್ನು ಒಂದೇ ದಿನದಲ್ಲಿ ಆಯೋಜಿಸಲು ತೀರ್ಮಾನಿಸ ಲಾಯಿತು ಎಂದು ಅವರು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಮಕ್ಕಳ ನಮ್ಮೆಯನ್ನು ಇತ್ತೀಚೆಗೆ ಆಯೋಜಿಸಲಾಗಿದ್ದು, ಪೆÇಮ್ಮಕ್ಕಡ ನಮ್ಮೆ ಕಾರ್ಯ ಯೋಜನೆಯೂ ಇದೀಗ ಕಾರ್ಯ ಗತವಾಗುತ್ತಿದ್ದು, ಮುಂದೆ ಇದು ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಪುತ್ತೂರುವಿನ ಶಾಸಕಿ ಶಕುಂತಳಾ ಶೆಟ್ಟಿ, ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮುಂತಾದವರು ಪಾಲ್ಗೊಳ್ಳಲಿರುವದಾಗಿ ಹೇಳಿದರು.
ಗೋಣಿಕೊಪ್ಪಲಿನಲ್ಲಿ ಕಳೆದ ಮೂರು ವರ್ಷಗಳಿಂದ ಯಶಸ್ವಿ ಮಹಿಳಾ ದಸರಾ ಆಯೋಜಿಸಿದ್ದ ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ, ಮಾಜಿ ಗ್ರಾ.ಪಂ.ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಮತ್ತು ತಂಡದ ಸಹಕಾರದೊಂದಿಗೆ ಪೆÇಮ್ಮಕ್ಕಡ ಸಂಗೀತ ಕಾರ್ಯಕ್ರಮ ವನ್ನು ಆಯೋಜಿಸ ಲಾಗಿದ್ದು ಖ್ಯಾತ ಕೊಡವ ಹಿನ್ನೆಲೆ ಗಾಯಕಿಯರಾದ ಬೊಟ್ಟೋಳಂಡ ಆಶಿತಾ, ಐಮಂಡ ಚರಿತಾ, ಪರದಂಡ ಕಾವ್ಯ, ಕಾವೇರಿ ಮುಂತಾದವರು ಭಾಗವಹಿಸಲಿದ್ದಾರೆ.
ವಿಚಾರಗೋಷ್ಠಿ ಹಾಗೂ ಆಯ್ದ ಕವಿಗಳಿಂದ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ಕಳೆದೆರಡು ವರ್ಷಗಳಿಂದ ಕೊಡವ ಸಾಹಿತ್ಯ ಅಕಾಡೆಮಿ ಮೂಲಕ 80ಕ್ಕೂ ಅಧಿಕ ಕಾರ್ಯಕ್ರಮ ನೀಡಲಾಗಿದೆ ಎಂದರು. ಕೊಡವ ರಂಗಭೂಮಿ ಕಲಾವಿದರಿಗೂ ಉತ್ತೇಜನ ನೀಡುತ್ತಿದ್ದು, ಪೆÇನ್ನಂಪೇಟೆ ಸುಜು ಬೆಳ್ಳಿಯಪ್ಪ ಸಂಚಾಲಕತ್ವದಲ್ಲಿ ಇತ್ತೀಚೆಗೆ ಮಂಜೇಶ್ವರದಲ್ಲಿ ಕೊಡವ ನಾಟಕವನ್ನೂ ಪ್ರದರ್ಶಿಸಲಾಯಿತು ಎಂದರು. ಕೊಡವ ರಂಗಭೂಮಿ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ನಾಟಕಗಳು ರೂಪುಗೊಳ್ಳಲು ಅಕಾಡೆಮಿ ಪೆÇ್ರೀತ್ಸಾಹ ಇದೆ ಎಂದರು.
ಮಲೆಯ, ಬಣ್ಣ, ಫಣಿಕ, ಕೆಂಬಟ್ಟಿ ಇತ್ಯಾದಿ ಮೂಲನಿವಾಸಿ ಜನಾಂಗಗಳಿಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾದ ಪರಿಕರಗಳನ್ನು ಅಕಾಡೆಮಿ ಮೂಲಕ ನೀಡಲಾಗಿದೆ. ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅವಧಿಯಲ್ಲಿ ರೂಪಿಸಿದ ಹಲವು ಯೋಜನೆಗಳನ್ನೂ ಕಾರ್ಯಗತಗೊಳಿಸಲಾಗಿದೆ. ಆಗಸ್ಟ್ 14, 2014 ರಲ್ಲಿ ತಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ರೂ. 2.10 ಕೋಟಿ ಅನುದಾನ ಬಳಕೆಯಾಗದೆ ಉಳಿಕೆಯಾಗಿತ್ತು. ಸರ್ಕಾರ ವಾರ್ಷಿಕವಾಗಿ ಕೊಡವ ಅಕಾಡೆಮಿಗೆ ರೂ.60 ಲಕ್ಷ ಅನುದಾನ ನೀಡುತ್ತಿದ್ದು, ವಿಭಿನ್ನ ಕಾರ್ಯಕ್ರಮಗಳ ಮೂಲಕ ಕೊಡಗು, ಬೆಂಗಳೂರು, ನವದೆಹಲಿಯಲ್ಲಿಯೂ ಅಕಾಡೆಮಿ ಪ್ರಾಯೋಜನೆಯಲ್ಲಿ ಕೊಡವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಪೆÇಮ್ಮಕ್ಕಡ ನಮ್ಮೆ ಕುರಿತಾದ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಅಕಾಡೆಮಿ ಸದಸ್ಯರಾದ ಮಾದೇಟಿರ ಬೆಳ್ಳಿಯಪ್ಪ, ಅಣ್ಣೀರ ಹರೀಶ್ ಮಾದಪ್ಪ, ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಪ್ರವಿಮೊಣ್ಣಪ್ಪ, ಕಾರ್ಯದರ್ಶಿ ಪ್ರಭಾವತಿ, ಸದಸ್ಯೆ ಮಿಲನ್‍ಗಣಪತಿ ಉಪಸ್ಥಿತರಿದ್ದರು.