ವೀರಾಜಪೇಟೆ, ಜ. 1: ತಾಲೂಕಿನ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಜನವರಿ 12 ರಂದು ನಡೆಯುವ ಚುನಾವಣೆಗೆ 12 ಕ್ಷೇತ್ರಗಳಿಂದ ವಿವಿಧ ರಾಜಕೀಯ ಪಕ್ಷಗಳ ಬೆಂಬಲಿತ ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿದ್ದು ಎಲ್ಲವೂ ಕ್ರಮಬದ್ಧವಾಗಿವೆ ಎಂದು ಚುನಾವÀಣಾಧಿಕಾರಿ ಮಹದೇವಸ್ವಾಮಿ ತಿಳಿಸಿದ್ದಾರೆ.

ವರ್ತಕರ ಕ್ಷೇತ್ರದಿಂದ ಎಂ.ಎಂ ಸಿದ್ಧಿಕ್, ಜಿ.ಎಸ್. ಗಣಪತಿ, ಉಳಿದಂತೆ ಅರಮೇರಿ ಹೆಚ್.ಎಂ. ಗಪ್ಪು, ಕೆ.ಯು. ಭೀಮಣಿ, ಬಿಟ್ಟಂಗಾಲ ಮಾಂಗೇರ ಕಾವೇರಮ್ಮ, ಮುಲ್ಲೆಂಗಡ ರೇವತಿ ಪೂವಯ್ಯ, ಬಿಟ್ಟಂಗಾಲ ನಾಮೇರ ಧರಣಿ, ಪೊನ್ನಂಪೇಟೆ ಕಾಡ್ಯಮಾಡ ಚೇತನ್, ಸುಬ್ರಮಣಿ, ಎಂ.ಎ ಬಿದ್ದಪ್ಪ ಚಂಬೆಬೆಳ್ಳೂರು ಐರಿರ ಬಿ ಕುಶಾಲಪ್ಪ, ಕೆ.ಕೆ.ಅಯ್ಯಪ್ಪ, ಶ್ರೀಮಂಗಲ ಕೆ.ಜಿ.ಬಾಲಕೃಷ್ಣ, ಸಿ.ಡಿ ಬೋಪಣ್ಣ, ಎಂ,ಕೆ ಮಾದಯ್ಯ, ಹೆಚ್.ಕೆ ಕುಟ್ಟಪ್ಪ, ಬಾಳೆಲೆ ಎಂ.ಜಿ. ವಿನೇಶ್, ಎ.ಎಂ. ಮುತ್ತಪ್ಪ, ಚಂಗಪ್ಪ ಮೇದಪ್ಪ. ಅಮ್ಮತ್ತಿ ಎಂ.ಡಿ. ಗಣಪತಿ, ಎನ್.ಕೆ ಸುರೇಶ್, ಎನ್.ಎಂ. ಕಾರ್ಯಪ್ಪ, ಕೆ.ಎಂ. ಸುಬ್ರಮಣಿ, ಪಾಲಿಬೆಟ್ಟ ಮಣಿಕಂಠ, ಹೆಚ್.ಎನ್. ಮೋಹನ್ ರಾಜ್, ಕಾನೂರು ಪೂಣಚ್ಚ, ಉಮೇಶ್, ಹುದಿಕೇರಿ ಎ.ಎಂ. ಮುತ್ತಪ್ಪ, ಎಂ.ಎಂ. ನವೀನ್, ಟಿ.ಶೆಟ್ಟಿಗೇರಿ ಬಿ. ಸುಶೀಲಾ, ಬಿ.ಜಿ. ಸುನಿತಾ, ಇವರುಗಳ ನಾಮಪತ್ರ ಕ್ರಮಬದ್ಧವಾಗಿವೆ.

ಆಕ್ಷೇಪ : ವರ್ತಕರ ಕ್ಷೇತ್ರದಿಂದ ಎಂ.ಎಂ. ಸಿದ್ಧಿಕ್ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ, ಪರಿಶೀಲನೆ ಸಂದÀರ್ಭ ಮತದಾರರ ಗುರುತಿನ ಚೀಟಿಯಲ್ಲಿ ಎಂ.ಎ. ಸಿದ್ಧಿಕ್ ಇರುವದನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಿಲನ್ ಗಣಪತಿ, ವಕೀಲ ಮಾಚಿಮಂಡ ಸುರೇಶ್, ಈ.ಸಿ. ಜೀವನ್ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ಧಿಕ್ ಪರ ವಕೀಲ ಎಂ.ಎಸ್. ಪೂವಯ್ಯ ಪ್ರಾರಂಭಿಕ ಹೆಸರಿಗೆ ಕೋರ್ಟ್‍ನಿಂದ ಅಫಿಡವಿಟ್ ನೀಡಿದ್ದಾರೆ ಎಂದು ವಾದ ಮಂಡಿಸಿದರು, ಚುನಾವಣಾಧಿಕಾರಿ ಮಹದೇವಸ್ವಾಮಿ ನಾಮಪತ್ರವನ್ನು ಸ್ವೀಕರಿಸಿದ ಕ್ರಮವನ್ನು ಬಿ.ಜೆ.ಪಿ ಆಕ್ಷೇಪಿಸಿದಾಗ ನಿಮಗೆ ಗೊಂದಲವಿದ್ದರೆ ನೀವು ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳಿ ಎಂದು ಹೇಳಿದರು.