ಸೋಮವಾರಪೇಟೆ, ಜೂ.3: ಕೊಡಗು ಜಾನಪದ ಪರಿಷತ್ ವತಿಯಿಂದ ಕುಶಾಲನಗರದ ರೈತ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ಉತ್ಸವದಲ್ಲಿ ಅಳವಡಿಸಲಾಗಿದ್ದ ವಸ್ತು ಪ್ರದರ್ಶನ, ಕೊಡಗಿನ ಪ್ರಾಚೀನ ಶ್ರೀಮಂತ ಪರಂಪರೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು.

ಪೂರ್ವಜರು ಬಳಸುತ್ತಿದ್ದ ಪರಿಕರಗಳನ್ನು ಇಂದಿಗೂ ಜೋಪಾನವಾಗಿಟ್ಟು ಸಂಗ್ರಹಿಸಿರುವ ಕುಶಾಲನಗರದ ಬಾಚರಣಿಯಂಡ ಅಪ್ಪಣ್ಣ, ಕಟ್ಟೆಮಾಡುವಿನ ತೋಟಂಬೈಲು ಪಾರ್ವತಿ ಅವರು ತಮ್ಮಲ್ಲಿರುವ ಅಪರೂಪದ ವಸ್ತುಗಳನ್ನು ಉತ್ಸವದಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ನೂರಾರು ಮಂದಿ ಈ ಪರಿಕರಗಳನ್ನು ಕುತೂಹಲದಿಂದ ವೀಕ್ಷಿಸಿದರು.

ರೊಟ್ಟೆ ಪಚ್ಚೆ, ಮಣ್ಣಿನ ಲ್ಯಾಂಪ್, ಮಣ್ಣಿನ ಹೂಜಿ, ಉಪ್ಪು ಹಾಕುವ ಬಳಪದ ಕಲ್ಲು, ತಂಬಾಕು ಬೂದಿ ಬಟ್ಟಲು, ಮರು ಭೂಮಿಯಲ್ಲಿ ನೀರು ಕುಡಿಯಲು ಬಳಸುವ ತಾಮ್ರದ ಹೂಜಿ, ದೋಸೆ ಹಿಟ್ಟು ಕಡಿದಿಡುವ ಮಡಿಕೆ, ಮರದ ಕೀ ಸ್ಟ್ಯಾಂಡ್, ಬಿದಿರಿನ ಗುತ್ತಿ, ಮಜ್ಜಿಗೆ ಇಡುವ ನೆಲು, ಬಾಣಂತಿಯರು ಸ್ನಾನ ಮಾಡುವ ಸಂದರ್ಭ ತೆಗೆದುಕೊಮಡು ಹೋಗುವ ಗೆಜ್ಜೆ ಕತ್ತಿ, 1933ರ ತಾಮ್ರದ ಪೌಂಡು ಕಲ್ಲು, ಮೆದೆ ಪರೆ, ಕಾಫಿ ಬೇಳೆ ಬಿಸಿ ಮಾಡುವ ಯಂತ್ರ, ತೇಂಗಲ ಎರೆಕ್ ಹೊಯ್ದಿಡುವ ಬರಣಿ, ಕರಿಚಟ್ಟಿ, ಬೀರಾಳಿ ಪೊಟ್ಟಿ, ಪಂದಿಕರಿಚೆಟ್ಟಿ, ಬೆಲ್ಲಕೊಮ್ಮೆ, ಕೊಮ್ಮೆ, ಚೇಕಲ, ಪೋಳಿಯ, ಚಿಟ್ಟಣಿಪುಟ್, ಗುಜಾಯಿ.

ಮಣ, ಪಾನಿ, ಸೇರು, ಮರದುಡಿ, ಮಕ್ಕಡ ದುಡಿ, ನೂಪುಟ್ಟೊರ, ಮಂಗರುವ, ಕಾಚ್‍ಂಗಳ್ಳ್, ಕುಡಿಪನೀರ್, ತಟ್ಟ ಕುಡಿಕೆ, ಪೊಂದಾಯ ಚಂದೂಕ, ಪರೆ, ಚೆಪ್ಪು, ಒಟ್ಟಿಮರಿಯ, ಒಡಿಕತ್ತಿ, ಕೈಲರಿವ ಕತ್ತಿ, ಅಂಬ್‍ಕತ್ತಿ, ಕಳಿಕೋಲ್, ಮಾನ, ಸೇರ್, ಕೊಚ್ಚಿಸೇರ್, ಕಡಾವು, ಮಾಲ್‍ಮಟ್, ಪೊಂಬಣ, ಬಟ್ಟಬರಿ ಪೊಟ್ಟಿ, ಬಾಚರಟೆ, ಕೈಕಣೆ, ಮೋರ್‍ಕುತ್ತಿ, ಅವಲಕ್ಕಿ ಒಳಕೆ, ಕಡಾಯಿಚಟ್ಟುವ, ಮತ್ತ್‍ಕಾವು, ಕೂಚಿಬ್ಬಿ, ಕುರಿಕುಟ್ಟ್.., ಹೀಗೆ ನೂರಾರು ಬಗೆಯ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಹಳೆಯ ಕಾಲದ ಪರಿಕರಗಳನ್ನು ಇಂದಿಗೂ ಜೋಪಾನವಾಗಿ ಕಾಪಾಡುತ್ತಾ ಬಂದಿರುವ ಅಪ್ಪಣ್ಣ ಹಾಗೂ ಪಾರ್ವತಿ ಅವರ ಆಸಕ್ತಿಯ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

– ವಿಜಯ್ ಹಾನಗಲ್