ಮಡಿಕೇರಿ, ಜೂ. 10: ಮಳೆಗಾಲ ಆರಂಭವಾಗುತ್ತಿದ್ದಂತೆ ತರಕಾರಿಗಳ ಬೆಲೆ ಕೂಡ ಗಗನಕ್ಕೇರುತ್ತಿದೆ. ಮಾರುಕಟ್ಟೆಗೆ ಆಗಮಿಸುವ ಗ್ರಾಹಕರು ತರಕಾರಿಗಳ ಬೆಲೆ ಕೇಳುತ್ತಿದ್ದಂತೆ ಅಬ್ಬಾ...! ಎಂದು ಉದ್ಘರಿಸಿ 1 ಕೆ.ಜಿ. ಕೊಳ್ಳಲೆಂದು ಬಂದವರು 1/2 ಕೆ.ಜಿ.ಗೆ. ಇಳಿಯುತ್ತಿದ್ದಾರೆ. ಎಲ್ಲದಕ್ಕೂ ಅಗತ್ಯವಿರುವ ಟೊಮೆಟೋ ಬೆಲೆ ಕೆಜಿಗೆ ರೂ. 80 ದಾಟಿದೆ. ಬೀನ್ಸ್ 80ರಿಂದ, 120, ಅವರೆಕಾಳು 160, ಬೆಳ್ಳುಳ್ಳಿ ಕೂಡ 160ಕ್ಕೆ ತಲಪಿದೆ. ತರಕಾರಿಗಿಂತ ಮೀನು, ಮಾಂಸವೇ ಲೇಸು ಎಂದು ಮಾಂಸಹಾರಿಗಳು ಹೇಳುತ್ತಿದ್ದರೆ, ಸಸ್ಯಾಹಾರಿಗಳು ತಲೆಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.

‘ಟೊಮೆಟೋ ಬೆಲೆ ಹೇಳಲು ನಮಗೇ ಮುಜುಗರವಾಗುತ್ತದೆ. ಬಹಳ ವರ್ಷಗಳ ನಂತರ ಇಷ್ಟೊಂದು ಬೆಲೆ ಏರಿಕೆಯಾಗದೆ ವ್ಯಾಪಾರ ಕೂಡ ಅಷ್ಟಕಷ್ಟೆ ಆಗುತ್ತಿದೆ' -ಸಂತೋಷ್.